ಗ್ಯಾಂಗ್ಟಾಕ್: ಸಿಕ್ಕಿಂನ ತಡಾಂಗ್ನಲ್ಲಿ ಗುರುವಾರ ತಡರಾತ್ರಿ ( Sikkim Landslide) ಭಾರಿ ಮಳೆಯಾದ ಕಾರಣ ರಿಂಬಿ ನದಿ ಸುತ್ತಲಿನ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ.
ಮಧ್ಯರಾತ್ರಿಯಿಂದಲೂ ಗುಡ್ಡದಿಂದ ಕೊಚ್ಚಿಬರುತ್ತಿರುವ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ನೇರವಾಗಿ ಜನವಸತಿ ಪ್ರದೇಶಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಅಪಾಯದ ವಲಯದಲ್ಲಿದ್ದ 128ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಸಿಂಗ್ಲಿತಾಮ್ನಲ್ಲಿ ತುರ್ತು ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದನೆಗೆ ಪಿತೂರಿ – ಮಾಸ್ಟರ್ ಮೈಂಡ್ ಶಬ್ಬೀರ್ ಸಿಕ್ಕಿಬಿದ್ದಿದ್ದು ಹೇಗೆ?
ಸಾರಿಗೆ ಸಂಪರ್ಕ ಕಡಿತ
ಭೂಕುಸಿತ ಪರಿಣಾಮ ಮಣ್ಣಿನ ಅವಶೇಷಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ರಿಂಬಿ-ಯುಕ್ಸೋಮ್ ಮುಖ್ಯ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಇದನ್ನೂ ಓದಿ: ಆಂಟಿ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ ಆರೋಪ – ಟ್ಯಾಟೂ ಅರ್ಜುನ್ ವಿರುದ್ಧ FIR
ರಿಂಬಿ ನದಿಗೆ ಅಡ್ಡಲಾಗಿ ಮಣ್ಣು ಕುಸಿದಿರುವುದರಿಂದ, ನೀರು ತನ್ನ ದಿಕ್ಕನ್ನು ಬದಲಾಯಿಸಿ ರಸ್ತೆ ಮತ್ತು ಸುತ್ತಮುತ್ತಲಿನ ಭೂಮಿಯನ್ನು ಸವೆಯುವಂತೆ ಮಾಡುತ್ತಿದೆ. ಪರಿಣಾಮ ಕೃತಕ ಸರೋವರ ನಿರ್ಮಾಣವಾಗುವ ಭೀತಿ ಎದುರಾಗಿದ್ದು, ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

