ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ (Sulwadi Temple poison case) ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ (Immadi Mahadevaswamy) ಮಧ್ಯಂತರ ಜಾಮೀನು (Interim Bail) ಅರ್ಜಿ ವಜಾ ಮಾಡಲಾಗಿದೆ.
ಅನಾರೋಗ್ಯದ ಕಾರಣ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಧ್ಯಂತರ ಜಾಮೀನು ಪಡೆದಿದ್ದರು. ಒಂದು ವರ್ಷ ಅವಧಿಗೆ ಮಧ್ಯಂತರ ಜಾಮೀನನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೀಡಿತ್ತು. 2026ರ ನವೆಂಬರ್ 17ರವರೆಗೆ ಮಾತ್ರ ಜಾಮೀನು ನೀಡಲಾಗಿತ್ತು. ನವೆಂಬರ್ 17ಕ್ಕೆ ನ್ಯಾಯಾಲಯಕ್ಕೆ ಇಮ್ಮಡಿ ಮಹದೇವಸ್ವಾಮಿ ಶರಣಾಗಬೇಕಿದೆ. ಮತ್ತೆ ಜಾಮೀನು ಮುಂದುವರಿಸುವAತೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾ ಮಾಡಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಪಕ್ಷದಲ್ಲೇ ಮೋಸ ಮಾಡುವವರು, ಬೆನ್ನಿಗೆ ಚಾಕು ಹಾಕುವವರು ಇದ್ದಾರೆ;ಸ್ವಪಕ್ಷೀಯರ ವಿರುದ್ಧವೇ ಮಲ್ಲಿಕಾರ್ಜುನ್ ಆಕ್ರೋಶ
ಇಮ್ಮಡಿ ಮಹದೇವಸ್ವಾಮಿ ಸುಳ್ವಾಡಿ ಕಿಚ್ಗುತ್ತ ಮಾರಮ್ಮ ದೇಗುಲದ ಆಡಳಿತದ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸಿ ಪ್ರಸಾದಕ್ಕೆ ವಿಷ ಬೆರೆಸಿದ್ದರು. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದರು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. 2018ರ ಡಿಸೆಂಬರ್ 18ರಂದು ಘೋರ ದುರಂತ ನಡೆದಿತ್ತು. ಅಲ್ಲದೇ ಜಾಮೀನು ಮಂಜೂರು ಮಾಡದಂತೆ ಸಂತ್ರಸ್ತ ಕುಟುಂಬಸ್ಥರು ಹಾಗೂ ಅಸ್ವಸ್ಥರು ಕೂಡ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಉಜ್ಜಯಿನಿಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ – 15 ಮಂದಿ ಸಿಲುಕಿರುವ ಶಂಕೆ
