ಮಸ್ಕತ್: ಭಾರತಕ್ಕೆ ತೆರಳುತ್ತಿದ್ದ `ಎಂವಿ ಕೇಪ್ ಡಾವೊ’ (MV Cape Dao) ವಾಣಿಜ್ಯ ಹಡಗಿನ ಮೇಲೆ ಓಮನ್ನ (Oman) ಪೂರ್ವ ಕರಾವಳಿ ಬಳಿ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ (Uttar Pradesh) ದಿಯೋರಿಯಾ ಮೂಲದ ವೈಪರ್ ಸೂರಜ್ ಯಾದವ್ ಎಂದು ಗುರುತಿಸಲಾಗಿದೆ. ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ಖಂಡಿಸಿದೆ. ಹಡಗಿನಲ್ಲಿದ್ದ ಭಾರತೀಯ ನಾವಿಕರ ಪೈಕಿ 19 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ದೃಢಪಡಿಸಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಸೇರಿದಂತೆ 47 ದೇಶಗಳ ನಾಗರಿಕರನ್ನ ರಷ್ಯಾ ಬಳಸುತ್ತಿದೆ: ಝೆಲೆನ್ಸ್ಕಿ ಆರೋಪ
ಘಟನೆಯಲ್ಲಿ ಮೃತಪಟ್ಟ ಸೂರಜ್ ಯಾದವ್ ಅವರ ಕುಟುಂಬಕ್ಕೆ ವಿದೇಶಾಂಗ ಸಚಿವಾಲಯ ಸಂತಾಪ ಸೂಚಿಸಿದೆ. ದಾಳಿ ನಡೆದಿರುವ ಕುರಿತು ಓಮನ್ ಅಧಿಕಾರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವಾಲಯ ತಿಳಿಸಿದೆ. ಓಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಕ್ಷಿಸಲ್ಪಟ್ಟ ಭಾರತೀಯ ನಾವಿಕರನ್ನು ಶೀಘ್ರವಾಗಿ ಭಾರತಕ್ಕೆ ಕರೆತರಲು ಓಮನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ಇಂದು CWRC, CWMA ಹೈವೋಲ್ಟೇಜ್ ಮೀಟಿಂಗ್ – ಇಂದಾದ್ರೂ ಕರ್ನಾಟಕದ ಪರ ಬರುತ್ತಾ ಆದೇಶ?
ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಆತಂಕಕಾರಿ ಬೆಳವಣಿಗೆಯಾಗಿವೆ ಎಂದು ಭಾರತ ಹೇಳಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಸಚಿವಾಲಯ ಕರೆ ನೀಡಿದೆ. ವಾಣಿಜ್ಯ ಹಡಗುಗಳು, ನಾವಿಕರು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತ ಒತ್ತಾಯಿಸಿದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಹಾಗೂ ಯಾವುದೇ ಅಡೆತಡೆಯಿಲ್ಲದ ನೌಕಾಯಾನವನ್ನು ಶೀಘ್ರವಾಗಿ ಪುನಃಸ್ಥಾಪಿಸಬೇಕು ಎಂದು ಎಂಇಎ ಹೇಳಿದೆ. ಇದನ್ನೂ ಓದಿ: ಜೆಡಿಎಸ್ ಮುಖಂಡ ಅಂದಾನಪ್ಪ ಮನೆಯಲ್ಲಿ ವಾಚ್ಮ್ಯಾನ್ ಆತ್ಮಹತ್ಯೆ
ಈ ನಡುವೆ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ, ಹಡಗಿಗೆ ಎರಡು ಟಾರ್ಪಿಡೊಗಳಿಂದ ದಾಳಿ ನಡೆದಿದೆ ಎಂದು ತಿಳಿಸಿದೆ. ಒಂದು ಟಾರ್ಪಿಡೊ ಹಡಗಿನ ಪೋರ್ಟ್ ಸೈಡ್ನ ಸಿ-ಡೆಕ್ಗೆ ಬಡಿದಿದ್ದು, ಇಲ್ಲಿ ಸಿಬ್ಬಂದಿಯ ವಾಸದ ಕೊಠಡಿಗಳು ಇದ್ದವು ಎಂದು ಹೇಳಿದೆ. ಮತ್ತೊಂದು ಟಾರ್ಪಿಡೊ ಎಂಜಿನ್ ರೂಮ್ ಸಮೀಪದ ಪೋರ್ಟ್ ಸೈಡ್ ಹಲ್ಗೆ ಬಡಿದಿದೆ ಎಂದು ಸಂಘಟನೆ ತಿಳಿಸಿದೆ. ಇದನ್ನೂ ಓದಿ: ವಿಟಿಯು ಖಜಾನೆಯಲ್ಲಿರೋ 610 ಕೋಟಿ ಮೇಲೆ ರಾಜ್ಯ ಸರ್ಕಾರದ ಕಣ್ಣು – 250 ಕೋಟಿ ನೀಡುವಂತೆ ಸಿಎಸ್ ಪತ್ರ
ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಹಾಗೂ ಈ ಪ್ರದೇಶದಲ್ಲಿ ಸಂಚರಿಸುವ ನಾವಿಕರಿಗೆ ಸುರಕ್ಷಿತ ಮಾರ್ಗ ಕಲ್ಪಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ. ಅಲ್ಲದೇ ಮೃತಪಟ್ಟ ಸೂರಜ್ ಯಾದವ್ ಸೇರಿದಂತೆ ಅಪಾಯದಲ್ಲಿರುವ ಭಾರತೀಯ ನಾವಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಡಬಲ್ ಧಮಾಕ – ರೋಷಿಬಿನಾಗೆ ಬೆಳ್ಳಿ, ರೋಯಿಂಗ್ನಲ್ಲಿ ಕಂಚು

