ಬೆಂಗಳೂರು: ಜೆಡಿಎಸ್ ಮುಖಂಡ (JDS Leader) ಅಂದಾನಪ್ಪ (Andanappa) ಮನೆಯಲ್ಲಿ ವಾಚ್‌ಮ್ಯಾನ್ (Watchman) ಕೆಲಸ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ.
ನಾಗರಾಜ್ (65) ಮೃತ ವಾಚ್‌ಮ್ಯಾನ್. ಹಾಸನ ಜಿಲ್ಲೆಯ ಅರಸೀಕೆರೆಯ ನಾಗರಾಜ್ ಲಗ್ಗೆರೆ ಬಳಿಯಿರುವ ಅಂದಾನಪ್ಪ ಮನೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ವಿಟಿಯು ಖಜಾನೆಯಲ್ಲಿರೋ 610 ಕೋಟಿ ಮೇಲೆ ರಾಜ್ಯ ಸರ್ಕಾರದ ಕಣ್ಣು – 250 ಕೋಟಿ ನೀಡುವಂತೆ ಸಿಎಸ್ ಪತ್ರ
ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಅಂದಾನಪ್ಪ ಬಿಲ್ಡಿಂಗ್‌ನ ಸ್ಟಾರ್ ಫ್ರೂಟ್ ಮರಕ್ಕೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಡಬಲ್ ಧಮಾಕ – ರೋಷಿಬಿನಾಗೆ ಬೆಳ್ಳಿ, ರೋಯಿಂಗ್‌ನಲ್ಲಿ ಕಂಚು

