– ಮಾಜಿ ಸೈನಿಕನ ಪತ್ನಿ ಮೃತ, ಬರೇಲಿಯಲ್ಲಿ ದುರಂತ
ಲಕ್ಕೋ (ಮೀರತ್): ಬರೇಲಿಯ ಬಿಜೆಪಿ ಮೇಯರ್ (BJP mayor) ಗುರುವಾರ (ಇಂದು) ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅನಾಹುತ ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು. ಬರೇಲಿ ಮೇಯರ್ ಉಮೇಶ್ ಗೌತಮ್ ಮತ್ತು ಅವರ ಪುತ್ರ ಪಾರ್ಥ್ ಗೌತಮ್ ಅವರು ಬರೇಲಿ ಕ್ಲಬ್ ಮೈದಾನದಲ್ಲಿ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ (Raksha Bandhan event) ಕಾಲ್ತುಳಿತ ಸಂಭವಿಸಿದ್ದು, 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಟಿಬೆಟ್ ಗಡಿಯಲ್ಲಿ ಒಡೆದ ಸರೋವರ, ಮತ್ತೆ ಪ್ರವಾಹ ಭೀತಿ: ನೇಪಾಳದಲ್ಲಿ ಹೈ ಅಲರ್ಟ್, ರಕ್ಷಣಾ ಕಾರ್ಯಾಚರಣೆ ಸ್ಥಗಿತ
ಪಿಲಿಭಿತ್ ಬೈಪಾಸ್ ರಸ್ತೆಯ ಚಂದ್ರಗುಪ್ತ ಪುರಂನ ಮಾಜಿ ಸೈನಿಕ ಭಗವಾನ್ ಸಿಂಗ್ ಅವರ ಪತ್ನಿ ಮಧು (45) ಮೃತ ದುರ್ದೈವಿ. ಜನಸಂದಣಿ ಮಧ್ಯೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಬರೇಲಿ ಕ್ಲಬ್ ಮೈದಾನದಿಂದ ಮಿಷನ್ ಆಸ್ಪತ್ರೆ 2 ಕಿಮೀ ದೂರದಲ್ಲಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಕ್ಷಾ ಬಂಧನ ಸಂಭ್ರಮದಲ್ಲಿ ದುರಂತ
ಯುವ ಸೇವಾ ಸಂಘ ಮತ್ತು ಪಾರ್ಥ್ ಗೌತಮ್ ಫೌಂಡೇಶನ್ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮವು ಇಂದು ಬೆಳಗ್ಗೆ 10 ಗಂಟೆಗೆ ಶುರುವಾಗಿತ್ತು. ನಗರದ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರು ರಾಖಿ ಕಟ್ಟಿ, ಉಡುಗೊರೆ ಪಡೆಯಲು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಈ ವರ್ಷ ಸುಮಾರು 20,000 ಸಾವಿರ ಮಹಿಳೆಯರಿಗೆ ರಾಖಿ ಹಬ್ಬದಂದು ಉಡುಗೊರೆ ನೀಡುವುದಾಗಿ ಸಂಘಟಕರು ಘೋಷಿಸಿದ್ದರು. ಕಳೆದ ವರ್ಷ 15,000 ಮಹಿಳೆಯರಿಗೆ ರಾಖಿ ಹಬ್ಬದ ಉಡುಗೊರೆ ನೀಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ಜರುಗಿತ್ತು. ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆ ಕಳವು – ಇಬ್ಬರು ಅರೆಸ್ಟ್
ನಂತರದಲ್ಲಿ ಮಹಿಳೆಯರೊಂದಿಗೆ ಪುರುಷರು ಹಾಗೂ ಮಕ್ಕಳು ಜನಸಂದಣಿಯೊಂದಿಗೆ ಸೇರಿಕೊಂಡರು. ಆಯೋಜಕರು ಹಾಗೂ ಅಧಿಕಾರಿಗಳು ಜನಸಂದಣಿ ನಿಯಂತ್ರಿಸಲು ಹರಸಾಹಸ ಪಟ್ಟರು. ಪರಿಸ್ಥಿತಿ ಕೈಮೀರಿದ್ದರಿಂದ ಕಾಲ್ತುಳಿತ ಸಂಭವಿಸಿತು.
ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇ, ಹೆದ್ದಾರಿ ಕಾಮಗಾರಿಗಳ ಮೇಲೆ ಮೂರನೇ ಕಣ್ಣು – ರಸ್ತೆ ಆಡಿಟ್‌ಗೆ EIL ನಿಯೋಜನೆ
