ಕಾರವಾರ: ಮೀನುಗಾರಿಕಾ ಬೋಟ್ (Fishing Boat) ಮುಳುಗಡೆಯಾಗುತ್ತಿದ್ದ ವೇಳೆ ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಬೋಟ್‌ಗಳ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ರಕ್ಷಿಸಿದ ಘಟನೆ ಕಾರವಾರದ (Karwar) ಅರಬ್ಬಿ ಸಮುದ್ರ ಭಾಗದ ಅಂಜದೀವ್ ದ್ವೀಪದ ಸಮೀಪ ನಡೆದಿದೆ.
ಬೆಳಂಬರ್ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿತ್ತು. ವಿಷಯ ತಿಳಿದ ತಕ್ಷಣ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳು ಸ್ಥಳಕ್ಕೆ ಧಾವಿಸಿ, ಬೋಟ್‌ನಲ್ಲಿದ್ದ ಎಲ್ಲಾ 24 ಮೀನುಗಾರರನ್ಬು ಸುರಕ್ಷಿತವಾಗಿ ರಕ್ಷಿಸಿವೆ. ಇದನ್ನೂ ಓದಿ: ಪಿಡಿಒ ದಂಪತಿ ಮನೆಯಲ್ಲಿ 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ
ಬೋಟ್ ಅನ್ನು ಉಳಿಸಿಕೊಳ್ಳಲು ಇತರೆ ಬೋಟ್‌ಗಳಿಗೆ ಹಗ್ಗ ಕಟ್ಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ವಿಫಲವಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅವಘಡದಿಂದ ಬೋಟ್ ಹಾಗೂ ಮೀನುಗಾರಿಕಾ ಪರಿಕರಗಳಿಗೆ ಸೇರಿ ಸುಮಾರು 50 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿರುವ ಅಂದಾಜಿದೆ.
ಈ ಹಿಂದೆ ಕೂಡ ನೀಲಕಂಠ ಖಾರ್ವಿ ಅವರಿಗೆ ಸೇರಿದ ಬೋಟ್‌ಗಳು ಅವಘಡಕ್ಕೀಡಾಗಿ ಹಾನಿಯಾಗಿದ್ದವು ಎನ್ನಲಾಗಿದ್ದು, ಮತ್ತೆ ಸಂಭವಿಸಿರುವ ಈ ಘಟನೆ ಕುಟುಂಬಕ್ಕೆ ಭಾರಿ ಆರ್ಥಿಕ ಹೊಡೆತ ನೀಡಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ. ಬೋಟ್ ಮುಳುಗಡೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 7ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು, ಯುವಕನ ಸ್ಥಿತಿ ಗಂಭೀರ
