ಶಿವಮೊಗ್ಗ: ಇಲ್ಲಿನ (Shivamogga) ವಿದ್ಯಾನಗರದಲ್ಲಿ ವಾಸವಾಗಿದ್ದ ಪಿಡಿಒ ದಂಪತಿ ಮನೆಯಲ್ಲಿ 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ (Gold) ಕಳ್ಳತನವಾಗಿದೆ.
ವಿದ್ಯಾನಗರದ 4ಎ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ಪಿಡಿಒ ದಂಪತಿ ವಾಸವಾಗಿದ್ದರು. ಎಂದಿನಂತೆ ದಂಪತಿ ಕರ್ತವ್ಯಕ್ಕೆ ತೆರಳಿದ್ದಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಮನೆ ಬೀಗ ಮುರಿದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಮನೆ ಕಳ್ಳತನ ಹಾಗೂ ಕಳ್ಳ ಪರಾರಿಯಾದ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಿಎಫ್ ಹಣವೂ ಬಂದಿಲ್ಲ, ಮನೆಯವರ ಸಾವಿಗೆ ನ್ಯಾಯವೂ ಸಿಕ್ಕಿಲ್ಲ: ಮೃತ ಚಂದ್ರಶೇಖರ್ ಪತ್ನಿ ಕವಿತಾ ಅಳಲು
ಕೇವಲ 30 ನಿಮಿಷದಲ್ಲಿ 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ, 1.5 ಲಕ್ಷ ರೂ. ಮೌಲ್ಯದ 15 ವಾಚ್‌ಗಳು ಹಾಗೂ 86,000 ರೂ. ನಗದು ಹಣ ಸೇರಿದಂತೆ 1,42,29,500 ರೂ. ಮೌಲ್ಯದ ವಸ್ತುಗಳನ್ನು ಕಳ್ಳ ದೋಚಿದ್ದಾನೆ. ದಂಪತಿಗಳ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾಕು ನಾಯಿಯನ್ನು ಕಚ್ಚಿದ ಬೀದಿನಾಯಿಗೆ ಗುಂಡಿಕ್ಕಿ ಹತ್ಯೆ – ಆರೋಪಿ ಅರೆಸ್ಟ್
