ಶಿವಮೊಗ್ಗ: ತಾನು ಸಾಕಿದ ನಾಯಿಯನ್ನು (Dog) ಕಚ್ಚಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಸಾಗರ (Sagar) ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಿಂಗಮೂರ್ತಿ ನಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಗ್ರಾಮದ ಬೋರಪ್ಪ ಎಂಬವರು ಪ್ರತಿನಿತ್ಯ ದನ ಮೇಯಿಸಲು ತೆರಳುತ್ತಿದ್ದ ವೇಳೆ ಅವರೊಂದಿಗೆ ಬೀದಿ ನಾಯಿಯೊಂದು ಹಿಂಬಾಲಿಸಿ ಬರುತ್ತಿತ್ತು. ಅದೇ ನಾಯಿ ಗ್ರಾಮದ ಲಿಂಗಮೂರ್ತಿಯ ಮನೆ ಬಳಿ ಬಂದಾಗ ಅಲ್ಲಿದ್ದ ಸಾಕು ನಾಯಿಗಳನ್ನು ಕಚ್ಚಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿ ನಾಯಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಆರೋಪಿ ವಿರುದ್ಧ ಬಿಎನ್‌ಎಸ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಆನಂದಪುರ (Anandapura) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
