ಮುಂಬೈ: ಮಹಾರಾಷ್ಟ್ರದ ಪ್ರತಿಷ್ಠಿತ ರೆಸ್ಟೋರೆಂಟ್‌ಗಳು (Maharashtra) ಮತ್ತು ಪುಣೆಯ ಸಿಪ್ಲಾ ಔಷಧ ಸೌಲಭ್ಯದ ವಿರುದ್ಧ FDA ಕೈಗೊಂಡಿದ್ದ ಕ್ರಮಗಳ ಬಗ್ಗೆ ಬಾಂಬೆ ಹೈಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಆವರಣದಲ್ಲಿರುವ ಐದು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದ FDA, ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂದು ಕ್ರಮ ಕೈಗೊಂಡಿತ್ತು. ಆದರೆ, ಮರುತಪಾಸಣೆಯಲ್ಲಿ ಶೇ.88ರಷ್ಟು ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ FDA ಅನಗತ್ಯ ಆತುರದಿಂದ ಕ್ರಮ ಕೈಗೊಂಡಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.ಇದನ್ನೂ ಓದಿ: ಯಶ್ ಟೆರರಿಸ್ಟ್ ಅಲ್ಲ… ಅವನೇಕೆ ಹೆದರಬೇಕು? ಏನೂ ಇಲ್ದೇ ಬಂದ ಹುಡ್ಗ ಇಂದು ವಿಶ್ವ ಆಳುತ್ತಿದ್ದಾನೆ: ತಾಯಿಯ ಖಡಕ್ ಮಾತು!
ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಕ್ಕೆ FDA ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ʼನಿಮ್ಮನ್ನು ನೀವೇ ದೇವರೆಂದುಕೊಂಡಿದ್ದೀರಾ? ಏನು ಬೇಕಾದರೂ ಮಾಡಬಹುದೇ? ಎಂದು ಕಟುವಾಗಿ ಪ್ರಶ್ನಿಸಿದೆ. ಕಾನೂನನ್ನು ಸರಿಯಾಗಿ ಪರಿಶೀಲಿಸದೆ ಮತ್ತು ಪ್ರಾಯೋಗಿಕ ದೃಷ್ಟಿಕೋನ ಇಲ್ಲದೆ ಕ್ರಮ ಕೈಗೊಂಡಿರುವುದಕ್ಕೆ ತುಕಾರಾಮ್ ಮುಂಢೆ ನೇತೃತ್ವದ FDA ತಂಡವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ದಾಳಿಯ ವೇಳೆ ನೀಡಿದ್ದ ಆದೇಶವನ್ನು ಹಿಂಪಡೆಯಲು FDA ಒಪ್ಪಿಕೊಂಡಿದೆ. MCAಗೆ ಹೊಸ ನೋಟಿಸ್ ನೀಡಿ, ಸಂಬಂಧಪಟ್ಟ ಸಂಸ್ಥೆಗೆ ತನ್ನ ವಾದ ಮಂಡಿಸಲು ಅವಕಾಶ ನೀಡುವುದಾಗಿ ತಿಳಿಸಿದೆ. ರೆಸ್ಟೋರೆಂಟ್‌ಗಳು ಇದೀಗ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿರುವುದರಿಂದ ಮತ್ತೆ ತೆರೆಯಲು ನ್ಯಾಯಾಲಯ ಅವಕಾಶ ನೀಡಿದೆ.
ಸಿಪ್ಲಾ ಔಷಧ ಸೌಲಭ್ಯ ಪ್ರಕರಣದಲ್ಲೂ FDAಗೆ ಚಾಟಿ
ಪುಣೆಯ ವಾಡ್ಕಿಯಲ್ಲಿರುವ ಸಿಪ್ಲಾ ಫಾರ್ಮಾ & ಲೈಫ್ ಸೈನ್ಸಸ್ ಸೌಲಭ್ಯದ ಔಷಧ ಮಾರಾಟ ಪರವಾನಗಿ ರದ್ದತಿ ಪ್ರಕರಣದಲ್ಲೂ FDAಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಂಪನಿಗೆ ಸಮರ್ಪಕವಾಗಿ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆಯೇ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿದೆ.
FDA ತಪ್ಪು ವಿಧಾನ ಅನುಸರಿಸಿದೆ. ಈ ಆದೇಶವು ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನೀವು ಒಳ್ಳೆಯ ಕೆಲಸವನ್ನೇನೋ ಮಾಡುತ್ತಿದ್ದೀರಿ. ಆದರೆ, ಈಗ ಮಿತಿಮೀರಿ ಕೆಲಸ ಮಾಡುತ್ತಿದ್ದೀರಿ. ತಪ್ಪು ಆಗಿದ್ದರೆ ಅದನ್ನು ಸರಿಪಡಿಸಬೇಕುʼ ಎಂದು ಪೀಠ FDAಗೆ ಸೂಚಿಸಿದೆ. ಇದನ್ನೂ ಓದಿ: ರೆಡ್ಡಿಗೆ ಸ್ಟೇ ಸಿಕ್ಕಿದೆಯೇ ಹೊರತು ಖುಲಾಸೆಯಾಗಿಲ್ಲ – ಬಿಜೆಪಿ ವಿರುದ್ಧ ಟಪಾಲ್ ಗಣೇಶ್ ಆಕ್ರೋಶ
