ರಾಯಚೂರು: ಇಂದಿನಿಂದ (ಆ.27) ಮಂತ್ರಾಲಯದಲ್ಲಿ (Mantralaya) ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಇಂದು ಸಂಜೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರಿಂದ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮಿ ಪೂಜೆಯೊಂದಿಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲೆಂದು ಹಾರೈಸಿದ ಯೋಗರಾಜ್ ಭಟ್
ಸೆ.2ರವರೆಗೆ ಏಳುದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದ್ದು, ಆಗಸ್ಟ್ 29ಕ್ಕೆ ಪೂರ್ವಾರಾಧನೆ, ಆ.30ಕ್ಕೆ ಮಧ್ಯಾರಾಧನೆ, ಆ.31ಕ್ಕೆ ಉತ್ತರಾರಾಧನೆ ನಡೆಯಲಿದೆ. ಜೊತೆಗೆ ಮಠದ ಆವರಣದಲ್ಲಿ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನ ತೆಪ್ಪೋತ್ಸವ ಜರುಗಲಿದೆ.
ಇನ್ನೂ ಇದೇ ಆರಾಧನಾ ಮಹೋತ್ಸವದಲ್ಲಿ ಆ.29ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ.31ರಂದು ಮಹಾರಥೋತ್ಸವ ನಡೆಯಲಿದ್ದು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಗುವುದು.ಇದನ್ನೂ ಓದಿ: ಈದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೆಸ್ತೀನ್ ಧ್ವಜ – ಪೊಲೀಸರಿಂದ ಧ್ವಜ ವಶಕ್ಕೆ
