ಸ್ಯಾಂಡಲ್‌ವುಡ್‌ನ ಹಾಸ್ಯನಟ ಚಿಕ್ಕಣ್ಣ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮೆಹಂದಿ ಶಾಸ್ತ್ರ ಹಾಗೂ ಹಳದಿ ಶಾಸ್ತ್ರ ಮುಗಿದಿದ್ದು, ಇಂದು (ಆ.29) ಆರತಕ್ಷತೆ ನಡೆಯಲಿದೆ. ನಾಳೆ (ಆ.30) ಧಾರಾ ಮುಹೂರ್ತ ಇರಲಿದೆ. ಸದ್ಯ ಚಿಕ್ಕಣ್ಣ ಹಾಗೂ ಅವರ ಭಾವಿ ಪತ್ನಿ ಪಾವನಾ ಅವರ ಅರಿಶಿಣ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.







