ಜಗತ್ತಿನಾದ್ಯಂತ ಬುಧವಾರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಯಶ್ ನಟನೆಯ ಟಾಕ್ಸಿಕ್‌ಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಟಾಕ್ಸಿಕ್ ಸಿನಿಮಾ ಯಶಸ್ಸಿಗೆ ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಕೂಡ ಹಾರೈಸಿದ್ದಾರೆ.
ಇನ್‌ಸ್ಟಾದಲ್ಲಿ ಪುಟ್ಟ ಪದ್ಯದ ರೀತಿ ಸಾಲುಗಳನ್ನು ಯೋಗರಾಜ್ ಭಟ್ ಹಂಚಿಕೊಂಡಿದ್ದಾರೆ.
View this post on Instagram
‘ನಾಡಿಗೆ ನಮಸ್ತೆ, ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಗೀತು ಮೋಹನ್‌ದಾಸ್, ಜೈ ಕೆವಿಎನ್, ಜೈ ಜನತೆ, ಜೈ ಸಿನಿಮಾ & ಜೈ ರಾಕಿಂಗ್ ಸ್ಟಾರ್ ಯಶ್.. ಅಭೂತಪೂರ್ವ ಪ್ರಯತ್ನ ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲೆಂದು ಹಾರೈಸುತ್ತಾ’ ಎಂದು ಯೋಗರಾಜ್ ಭಟ್ ಬರೆದುಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರವು ವಿಶ್ವಾದ್ಯಂತ 6 ಭಾಷೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ 5,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ.
