– ಮಹಾರಾಷ್ಟ್ರ ಗಡಿ ಸಮಿತಿ ಸಭೆಯಲ್ಲಿ ಎಂಇಎಸ್ ಭಾಗಿ
ಬೆಳಗಾವಿ: ಸಿಎಂ ಡಿಕೆಶಿ (DK Shivakumar) ಬೆಳಗಾವಿಗೆ ಬರುವ ಮುನ್ನಾ ದಿನವೇ ಮಹಾರಾಷ್ಟ್ರ ದಲ್ಲಿ ಮಿಂಚಿನ ಬೆಳವಣಿಗೆಯಾಗಿದೆ. ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ನೇತೃತ್ವದಲ್ಲಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯನ್ನ ಮಹಾರಾಷ್ಟ್ರ ಸರ್ಕಾರ ಮಾಡಿದೆ.
ಮುಂಬೈನ (Mumbai) ರಾಜಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಮಾಜಿ ಸಿಎಂ ಶರದ್ ಪವಾರ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಸುನೇತ್ರಾ ಪವಾರ್, ನಿತೇಶ್ ರಾಣಾ ಸೇರಿ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸದಸ್ಯರು ಭಾಗಿಯಾಗಿದ್ದಾರೆ.
Strengthening Support for Marathi-Speaking People in the Border Areas!
Chaired a meeting of the high-powered committee on the Maharashtra-Karnataka border issue at Vidhan Bhavan in Mumbai today.
Maharashtra Government stands firmly with the Marathi-speaking people living in the… https://t.co/GkISdPvqbC
— Devendra Fadnavis (@Dev_Fadnavis) July 8, 2026
ʻಮಹಾʼ ಸಿಎಂ ದೇವೆಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಡದ್ರೋಹಿ ಎಂಇಎಸ್ ಮುಖಂಡರೂ ಸಹ ಭಾಗಿಯಾಗಿದ್ದಾರೆ. ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ನಲ್ಲಿರುವ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದ ವಿಚಾರಣೆ ಆರಂಭವಾಗಬೇಕಿದೆ, ಈ ದಿಸೆಯಲ್ಲಿ ಪ್ರಯತ್ನಿಸಲು ಉನ್ನತ ಅದಿಕಾರಿಗಳ ಸಮಿತಿ ನಿರ್ಧಾರ ಮಾಡಿದೆ. ಇದನ್ನೂ ಓದಿ: SIR ರೂಲ್ಸ್ ಪಾಲಿಸದ 35 ಬಿಎಲ್‌ಒಗಳ ವಿರುದ್ಧ ಕ್ರಮ – ಸಾಮೂಹಿಕ ಅರ್ಜಿ ಭರ್ತಿಗೆ ಆಯೋಗ ಬ್ರೇಕ್
ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಬೆನ್ನಿಗೆ ನಿಲ್ಲುವುದು, ಈಗಾಗಲೇ ಗಡಿ ಭಾಗದ ಮರಾಠಿ ಭಾಷಿಕರಿಗೆ ಶಿಕ್ಷಣದಲ್ಲಿ ಮೀಸಲಾತಿ, ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದ್ದು, ಒಕ್ಕೂಟ ವ್ಯವಸ್ಥೆ ಧಿಕ್ಕರಿಸಿ ಕರ್ನಾಟಕದ ಗಡಿ ಪ್ರದೇಶದ ಮರಾಠಿ ಭಾಷಿಕರಿಗೆ ವಿವಿಧ ಯೋಜನೆ ಘೋಷಣೆ ಮಾಡಿದೆ.

ಇತ್ತ ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ಗಡಿ ವಿವಾದ ಸಂಬಂಧ ಸಭೆ ನಿಗದಿಯಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಳಿಸಲು ಗಡಿ ಉನ್ನತ ಮಟ್ಟದ ಸಮಿತಿ ನಿರ್ಧಾರ ಮಾಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬಿರುಸು ಪಡೆದ ಮಳೆ – ಒಂದೇ ದಿನ ಹಾರಂಗಿ ಜಲಾಶಯಕ್ಕೆ ಹರಿದು ಬಂತು 1.5 ಟಿಎಂಸಿ ನೀರು
ಇದೇ ಸಭೆಯಲ್ಲಿ, ಬೆಳಗಾವಿ ಗಡಿ ಭಾಗದಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಎಂಇಎಸ್‌ಗೆ ಸದಾ ಬೆಂಬಲವಿದೆ ಎಂದು ಸಮಿತಿ ತಿಳಿಸಿದೆ.
