ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ಕಡಿದಾದ ಪರ್ವತದ ತುದಿಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದು ಸೇನಾ ಅಧಿಕಾರಿ ಹುತಾತ್ಮರಾಗಿದ್ದಾರೆ.
ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದಾರೆ. 16 ನೇ ದಿನದ ಆಪರೇಷನ್ ಶೆರಾವಲಿ (Operation Sherawali) ಕಾರ್ಯಾಚರಣೆ ವೇಳೆ ಈ ಅವಘಡ ಸಂಭವಿಸಿದೆ. ಸೈನಿಕರ ತಂಡವನ್ನು ಮುನ್ನಡೆಸುತ್ತಿದ್ದ ಲೆಫ್ಟಿನೆಂಟ್ ಕಾಲು ಜಾರಿ ಕಮರಿಗೆ ಬಿದ್ದರು. ತಕ್ಷಣ ಜೊತೆಯಲ್ಲಿದ್ದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಬಿಸಿ ಮುಟ್ಟಿಸಲು ಮತ್ತೆ ರೆಡಿ – ಭಾರತಕ್ಕೆ ಬಂದಿಳಿದ ಮತ್ತೊಂದು ಸುದರ್ಶನ ಚಕ್ರ
ಬೀರೇಶ್ವರ್ ಗೋಸ್ವಾಮಿ (Lieutenant Beereshwar Goswami) ಸಾವಿನ ಬಗ್ಗೆ ವೈಟ್ ನೈಟ್ ಕಾರ್ಪ್ಸ್ ಸಂತಾಪ ಸೂಚಿಸಿದೆ. ವೈಟ್ ನೈಟ್ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ಪಿಕೆ ಮಿಶ್ರಾ ಮತ್ತು ಎಲ್ಲಾ ಶ್ರೇಣಿಯ ಅಧಿಕಾರಿಗಳು ಗೌರವ ಸಲ್ಲಿಸಿ, ಅವರ ತ್ಯಾಗವನ್ನು ಸೈನ್ಯಕ್ಕೆ ಮರೆಯಲಾಗದ ಸ್ಫೂರ್ತಿ ಎಂದು ಬಣ್ಣಿಸಿದ್ದಾರೆ.
#𝗪𝗵𝗶𝘁𝗲𝗞𝗻𝗶𝗴𝗵𝘁𝗖𝗼𝗿𝗽𝘀 | #𝗢𝗽𝗲𝗿𝗮𝘁𝗶𝗼𝗻𝗮𝗹𝗜𝗻𝗰𝗶𝗱𝗲𝗻𝘁#GOC WhiteKnightCorps and all ranks express profound grief on the untimely demise of 𝗟𝗶𝗲𝘂𝘁𝗲𝗻𝗮𝗻𝘁 𝗕𝗲𝗲𝗿𝗲𝘀𝗵𝘄𝗮𝗿 𝗚𝗼𝘀𝘄𝗮𝗺𝗶, who made the 𝗦𝘂𝗽𝗿𝗲𝗺𝗲 𝗦𝗮𝗰𝗿𝗶𝗳𝗶𝗰𝗲 while… pic.twitter.com/9Sby28jHXD
— White Knight Corps (@Whiteknight_IA) June 7, 2026
ಆಪರೇಷನ್ ಶೆರಾವಲಿ
ಮೇ ಅಂತ್ಯದಲ್ಲಿ ಪ್ರಾರಂಭವಾದ ಆಪರೇಷನ್ ಶೆರಾವಲಿ, ರಾಜೌರಿಯ ಡೋರಿಮಾಲ್-ಗಂಭೀರ್ ಮೊಘಲನ್ ಪಟ್ಟಿಯ ದಟ್ಟ ಕಾಡುಗಳಲ್ಲಿ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಎರಡರಿಂದ ಮೂರು ಪಾಕಿಸ್ತಾನಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಪ್ರಾರಂಭಿಸಲಾಯಿತು.
ಗುಪ್ತಚರ ಮಾಹಿತಿಯ ಪ್ರಕಾರ ‘ಫೌಜಿ’ ಎಂಬ ಕೋಡ್-ಹೆಸರಿನ ಉನ್ನತ ಕಮಾಂಡರ್ ಸೇರಿದಂತೆ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಪರ್ವತ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕಡಿದಾದ ಪ್ರದೇಶವನ್ನು ಸೈನಿಕರು ಸುತ್ತುವರಿದಿದ್ದಾರೆ. ಉಗ್ರರನ್ನು ಬೇಟೆಯಾಡಲು ಡ್ರೋನ್‌ಗಳು ಮತ್ತು ಟ್ರ್ಯಾಕರ್ ಶ್ವಾನಗಳನ್ನು ಸೈನಿಕರು ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನೀಟ್ ಪರೀಕ್ಷೆಗೆ ಸೇನೆ ನೆರವು?
