ಚಿಕ್ಕಬಳ್ಳಾಪುರ: ಶಿವನ ಕೃಪೆಗೆ ಪಾತ್ರರಾಗಲು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ (Kashi Vishwanath Temple) ಸಾಂಪ್ರದಾಯಿಕವಾಗಿ ನಡೆಸಲಾಗುವ ಪ್ರಬಲ ಪ್ರಕ್ರಿಯೆಯಾದ ಸಪ್ತಋಷಿ ಆವಾಹನವನ್ನ ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ಸಲ್ಲಿಸಲಾಯಿತು.

ಈ ಪವಿತ್ರ ಪ್ರಕ್ರಿಯೆಯನ್ನ ಕಾಶಿ ವಿಶ್ವನಾಥ ದೇವಾಲಯದ ಪುರೋಹಿತರು ಅದರ ಶುದ್ಧ ರೂಪದಲ್ಲಿ ಸಂರಕ್ಷಿಸಿದ್ದಾರೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗುವ ಸಪ್ತಋಷಿ ಆವಾಹನವನ್ನ (Saptarishi Avahanam) ಇತ್ತೀಚಿನ ವರ್ಷಗಳಲ್ಲಿ ಕೊಯಮತ್ತೂರಿನ 112 ಅಡಿ ಆದಿಯೋಗಿಯ ಮುಂದೆ ಇರುವ ಯೋಗೇಶ್ವರ ಲಿಂಗದಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯ ಸಮಯದಲ್ಲಿ ಸದ್ಗುರುಗಳ ಮೇಲಿನ ಭಕ್ತಿಯಿಂದ ಕಾಶಿಯ ಏಳು ಪುರೋಹಿತರು (Priests) ನಡೆಸಿದ್ದರು.

ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಅರ್ಚಕರು ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿರುವ ಯೋಗೇಶ್ವರ ಲಿಂಗದಲ್ಲಿ ವಸಂತ ವಿಷುವತ್ ಸಂಕ್ರಾಂತಿಯ ಸುತ್ತ ಸಪ್ತಋಷಿ ಆವಾಹನವನ್ನ ನಡೆಸಿದರು. ಯೋಗೇಶ್ವರ ಲಿಂಗವು ದೇಹದ ಐದು ಪ್ರಮುಖ ಚಕ್ರಗಳ ಅಭಿವ್ಯಕ್ತಿಯಾಗಿದೆ.

