– ಆರೋಪಿಗಳ ಬ್ಯಾಗ್ರೌಂಡ್ ಕೇಳಿ ಪೊಲೀಸರೇ ಸುಸ್ತು
ಬೆಂಗಳೂರು: ಕಾಂತಾರಾ ನಟಿ ರುಕ್ಮಿಣಿ ವಸಂತ್ (Rukmini Vasanth) AI ಅಶ್ಲೀಲ ಫೋಟೋ ವೈರಲ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ವೇಳೆ ಆರೋಪಿ (Accused) ಕುರಿತು ಸ್ಫೋಟಕ ರಹಸ್ಯಗಳು ಬಗಿರಂಗಗೊಂಡಿವೆ.
ವಿಚಾರಣೆ ವೇಳೆ ಆರೋಪಿಗಳ ಬ್ಯಾಗ್ರೌಂಡ್ ಕೇಳಿ ಪೊಲೀಸರೇ (Police) ಸುಸ್ತಾಗಿದ್ದಾರೆ. ಆರೋಪಿ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ (BSc Nursing) ಓದ್ತಿದ್ದಾನೆ. ತನ್ನದೇ ಯುಟ್ಯೂಬ್ ಚಾನೆಲ್ ಮಾಡಿಕೊಂಡಿದ್ದ ರವಿಕುಮಾರ್, ಡೀಪ್ ಫೇಕ್ ವೀಡಿಯೊಗಳನ್ನ ಮಾಡಿ ಅಪ್ಲೋಡ್ ಮಾಡೋದಕ್ಕೆ ಶುರು ಮಾಡಿದ್ದ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎಐ ಬಳಸಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್ – ಮೂವರು ಅರೆಸ್ಟ್

ಮತ್ತೊಬ್ಬ ಆರೋಪಿ ರಂಜಿತ್ ಕುಮಾರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ವರ್ಷಕ್ಕೆ 20 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಹೊಂದಿದ್ದಾನೆ. ಫನ್‌ಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ ಮಾಡ್ತಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ – ಮೆಟಾಗೆ ಸೈಬರ್ ಕ್ರೈಂ ಪೊಲೀಸರ ಪತ್ರ
3ನೇ ಆರೋಪಿ ಚಂದ್ರಕಾಂತ್ ಚಾರ್ಟೆಡ್ ಅಕೌಂಟೆಂಟ್ (CA) ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಮಜಾ ತೆಗೆದುಕೊಳ್ಳಲು ನಟಿಯರ ಡೀಫ್ ಫೇಕ್ ವೀಡಿಯೊ ಮಾಡ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಬಂಧಿತರಿಂದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ಎಐ ತಂತ್ರಜ್ಞಾನ ಬಳಸಿ ವಿಡಿಯೋ ಹಾಗೂ ಫೋಟೋ ವೈರಲ್ ಮಾಡಿದ್ದರು ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ಕೆಟ್ಟ ಕೆಲಸಗಳಿಗೆ AI ಬಳಸಬೇಡಿ – ಬಿಕಿನಿ ಫೋಟೋ ವೈರಲ್ ಬಗ್ಗೆ ರುಕ್ಮಿಣಿ ವಸಂತ್ ರಿಯಾಕ್ಷನ್
