ಬೀದರ್: ಉಪಲೋಕಾಯುಕ್ತ (Lokayukta Raid) ಬಿ. ವೀರಪ್ಪ ಅವರು ಬೀದರ್‌ನ(Bidar) ಬ್ರಿಮ್ಸ್ ಆಸ್ಪತ್ರೆಯಲ್ಲಿ(BRIMS) ಪರಿಶೀಲನೆ ನಡೆಸಿದ ವೇಳೆ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜುಕುಮಾರ್ ಬಳಿ 1 ಲಕ್ಷ ನಗದು ಮತ್ತು 1 ಲಕ್ಷ ಮೊತ್ತದ ಚೆಕ್ ಪತ್ತೆಯಾಗಿದೆ. ಈ ವೇಳೆ ಹಣದ ಮೂಲದ ಬಗ್ಗೆ ಉಪಲೋಕಾಯುಕ್ತರು ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಬಳಿ ಇಷ್ಟೊಂದು ಹಣ ಹೇಗೆ ಬಂತು ಎಂದು ಬಿ. ವೀರಪ್ಪ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯೊಳಗೆ ಹಣದ ವ್ಯವಹಾರ ನಡೆದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.ಇದನ್ನೂ ಓದಿ: ಅಲ್ಲಲ್ಲಿ ವರುಣಾರ್ಭಟ – ಮುಂದಿನ 3 ಗಂಟೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ
ಹಣದ ಬಗ್ಗೆ ಮಾಹಿತಿ ಕೇಳಿದಾಗ ಲ್ಯಾಬ್ ಟೆಕ್ನಿಶಿಯನ್ ಸಂಜುಕುಮಾರ್ ಸಮರ್ಪಕ ಉತ್ತರ ನೀಡದೆ ತಡಬಡಾಯಿಸಿದ್ದಾನೆ. ಇದರಿಂದ ಅನುಮಾನ ಮತ್ತಷ್ಟು ಗಾಢವಾಗಿದೆ. ಬಳಿಕ ಪತ್ತೆಯಾದ ಹಣ ಮತ್ತು ಚೆಕ್‌ನ್ನು ಜಪ್ತಿ ಮಾಡಲು ಉಪಲೋಕಾಯುಕ್ತರು ಸೂಚಿಸಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಮೋಟೋ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಣದ ಮೂಲ ಏನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.ಇದನ್ನೂ ಓದಿ: ನಾಯಿ ಗೂಡಲ್ಲಿ ಲಾಕ್ ಆಗಿದ್ದ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
