ಬೆಂಗಳೂರು: ನಗರದ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ ಮೂರು ಗಂಟೆ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ (Bengaluru) ಮೋಡ ಕವಿದ ವಾತಾವರಣವಿದ್ದು, ಸಂಪೂಣವಾಗಿ ಕತ್ತಲು ಆವರಿಸಿದೆ. ಮುಂದಿನ ಮೂರು ಗಂಟೆ ಮಳೆಯಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೋರೇಷನ್ ಸುತ್ತಮುತ್ತ ಮಳೆ ಆರಂಭವಾಗಿದ್ದು, ಪ್ಯಾಲೆಸ್ ಗ್ರೌಂಡ್ ಸುತ್ರಮುತ್ತ ಅಬ್ಬರದ ಮಳೆಯಾಗುತ್ತಿದೆ.
