Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

Latest

ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

Public TV
Last updated: August 6, 2025 10:09 am
Public TV
Share
3 Min Read
Ajit Doval
SHARE

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸುಂಕ ವಿಧಿಸುವ ಎಚ್ಚರಿಕೆಗೂ ಜಗ್ಗದ ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನ ಮುಂದುವರಿಸಿದೆ. ಈ ನಡುವೆ ಭಾರತ – ರಷ್ಯಾ ನಡುವಿನ ಸಂಬಂಧವನ್ನ ಇನ್ನಷ್ಟು ಗಟ್ಟಿಗೊಳಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ರಾಜಧಾನಿ ಮಾಸ್ಕೋಗೆ ಭೇಟಿ ಕೊಟ್ಟಿದ್ದಾರೆ.

ರಷ್ಯಾ ಮತ್ತು ಭಾರತದ ಸಂಬಂಧವನ್ನ ಬಲಪಡಿಸುವ ಉದ್ದೇಶದಿಂದ, ದೋವಲ್ ಮಾಸ್ಕೋಗೆ (Moscow) ಭೇಟಿ ನೀಡಿದ್ದಾರೆ. ಅಲ್ಲದೇ ಮುಂದಿನ ರಕ್ಷಣಾ ಮತ್ತು ವ್ಯಾಪಾರ ಮಾತುಕತೆಗಾಗಿ ವಿದೇಶಾಂಗ ಸಚಿವ ಎಸ್‌. ಜೈಶಂಕ‌ರ್ ಕೂಡ ಈ ತಿಂಗಳ ಕೊನೆಯಲ್ಲಿ ರಷ್ಯಾಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

jaishankar 1

ದೋವಲ್ ಅವರ ರಷ್ಯಾ ಭೇಟಿ ಮೊದಲೇ ನಿಗದಿಯಾಗಿತ್ತು. ಆದರೆ ಟ್ರಂಪ್‌ ಅವರ ಹೇಳಿಕೆಗಳಿಂದಾಗಿ ಇದಕ್ಕೀಗ ಹೆಚ್ಚು ಮಹತ್ವ ಪಡೆದುಕೊಂಡಂತಾಗಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಸುಧಾರಿಸಲು ಈ ಭೇಟಿ ಸಹಾಯ ಮಾಡುತ್ತದೆ. ಅಮೆರಿಕದ ಒತ್ತಡದ ನಡುವೆಯೂ ಭಾರತವು ರಷ್ಯಾದೊಂದಿಗೆ ತನ್ನ ಸಂಬಂಧವನ್ನ ಮುಂದುವರೆಸಲು ಬಯಸಿದೆ ಎಂಬುದನ್ನು ಇದು ತೋರಿಸುತ್ತದೆ.

ಜೈಶಂಕ‌ರ್ ಅವರ ಭೇಟಿಯು ಕೂಡ ಉಭಯ ದೇಶಗಳ ನಡುವಿನ ಮಾತುಕತೆಗೆ ವೇದಿಕೆ ಕಲ್ಪಿಸುತ್ತದೆ. ತೈಲ ವ್ಯಾಪಾರ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ | ಕೊಚ್ಚಿ ಹೋದ ಗ್ರಾಮ – ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

trump modi

24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ
ಇನ್ನೂ ಅಜಿತ್‌ ದೋವಲ್‌ ಭೇಟಿಗೂ ಮುನ್ನವೇ‌ ಟ್ರಂಪ್‌ 24 ಗಂಟೆಯಲ್ಲಿ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು (Tariff Threat) ಗಣನೀಯವಾಗಿ ಏರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

ಭಾರತ ಲಾಭ ಮಾಡಿಕೊಳ್ಳುತ್ತಿದೆ
ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್‌ ಮಾತನಾಡಿದ್ದರು, ಭಾರತ ರಷ್ಯಾದಿಂದ (India-Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕರ್ನಾಟಕಕ್ಕೆ 46,933 ಕೋಟಿ ತೆರಿಗೆ ಹಣ ಬಿಡುಗಡೆ – ಕೇಂದ್ರ ಹಣಕಾಸು ಸಚಿವಾಲಯ

ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.

2ನೇ ಅತೀ ದೊಡ್ಡ ಖರೀದಿದಾರ
ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.

TAGGED:ajit dovaldonald trumpIndia US Fuel Warnarendra modiRussian OilTariff Threatಅಜಿತ್ ದೋವಲ್
Share This Article
Facebook Whatsapp Whatsapp Telegram

Cinema news

gilli fan tattoo bigg boss
BBK 12: ಬಿಗ್‌ಬಾಸ್ ಗಿಲ್ಲಿಯ ಅಭಿಮಾನಿ ಕೈ ಮೇಲೆ ಟ್ಯಾಟೂ!
Cinema Latest Top Stories TV Shows
rakshitha rashika bigg boss
ನಿಂಗೆ ಗಿಲ್ಲಿ ಬೇಕು: ರಕ್ಷಿತಾ ವಿರುದ್ಧ ಗುಡುಗಿ ಕಳಪೆ ಕೊಟ್ಟ ರಾಶಿಕಾ
Cinema Latest Top Stories TV Shows
Samantha
`ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!
Cinema Latest South cinema Top Stories
Bigg Boss Ashwini Gowda and dhruvanth
ಇನ್ನೆರಡೇ ದಿನದಲ್ಲಿ ಮನೆಯಿಂದ ಇಬ್ರು ಹೋಗ್ತಾರೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಧ್ರುವಂತ್
Cinema Latest Top Stories TV Shows

You Might Also Like

Mysuru
Crime

ಮಗಳ ಸಾವಿಗೆ ಪೋಷಕರೆ ಕಾರಣನಾ? ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!

Public TV
By Public TV
4 minutes ago
Kothanur Delivery Boy Arrest copy
Bengaluru City

ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಕಿರುಕುಳ – ಕಾಮುಕ ಡೆಲಿವರಿ ಬಾಯ್ ಅರೆಸ್ಟ್

Public TV
By Public TV
12 minutes ago
daily horoscope dina bhavishya
Astrology

ದಿನ ಭವಿಷ್ಯ: 10-01-2026

Public TV
By Public TV
29 minutes ago
Nadine de Klerks
Cricket

WPL 2026: ಬೌಲಿಂಗ್‌ನಲ್ಲಿ 4 ವಿಕೆಟ್‌, ಬ್ಯಾಟಿಂಗ್‌ನಲ್ಲಿ ಫಿಫ್ಟಿ- ಡಿ ಕ್ಲರ್ಕ್‌ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ – RCB ಶುಭಾರಂಭ

Public TV
By Public TV
8 hours ago
dandeli advocate ajit naik murder case
Court

ದಾಂಡೇಲಿ ವಕೀಲ ಅಜಿತ್ ನಾಯ್ಕ ಹತ್ಯೆ ಕೇಸ್;‌ ಆರೋಪಿ ದೋಷಿ ಅಂತ ಕೋರ್ಟ್‌ ತೀರ್ಪು

Public TV
By Public TV
9 hours ago
Sabarimala chief priest Kandararu Rajeev
Latest

ಶಬರಿಮಲೆ ಚಿನ್ನ ಕಳ್ಳತನ ಕೇಸ್ – SITಯಿಂದ ಪ್ರಧಾನ ಅರ್ಚಕ ಕಂದರಾರು ರಾಜೀವ್ ಅರೆಸ್ಟ್

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?