ಟೆಕ್ಸಾಸ್: 2026 ರ ಫಿಫಾ ವಿಶ್ವಕಪ್ (FIFA World Cup 2026) ಗ್ರೂಪ್ ಕೆ ಪಂದ್ಯದ ಮೊದಲಾರ್ಧದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ 3-0 ಅಂತರದಿಂದ ಪೋರ್ಚುಗಲ್ ಮುನ್ನಡೆ ಸಾಧಿಸಿದೆ. ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಎರಡು ಗೋಲುಗಳೊಂದಿಗೆ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.
ಪೋರ್ಚುಗೀಸ್ ಸೂಪರ್‌ಸ್ಟಾರ್ ರೊನಾಲ್ಡೊ ಆರು ವಿಶ್ವಕಪ್ ಆವೃತ್ತಿಗಳಲ್ಲಿ ಗೋಲು ಗಳಿಸಿದ ಇತಿಹಾಸದಲ್ಲಿ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನುನೊ ಮೆಂಡೆಸ್ ಎರಡನೇ ಗೋಲು ಗಳಿಸಿದರು.
No Ronaldo fan will see this video without liking it 🐐 pic.twitter.com/KnYmBhG7dy
— BOOMLUCK⚽️🏀 (@Boomluck1zz) June 23, 2026
ರೊನಾಲ್ಡೊ ಈಗ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಪರ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಡಿಆರ್ ಕಾಂಗೋ ವಿರುದ್ಧ 1-1 ಡ್ರಾ ಸಾಧಿಸಿದ ನಂತರ ಪೋರ್ಚುಗಲ್ ತನ್ನ ಅಭಿಯಾನವನ್ನು ನಿರಾಶಾದಾಯಕವಾಗಿ ಪ್ರಾರಂಭಿಸಿತು. ಏತನ್ಮಧ್ಯೆ, ಸ್ಪರ್ಧೆಯ ತನ್ನ ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಉಜ್ಬೇಕಿಸ್ತಾನ್ ಕೂಡ 0-2 ಅಂತರದಿಂದ ಸೋತಿತ್ತು.
2026 ರ FIFA ವಿಶ್ವಕಪ್‌ನಲ್ಲಿ ಗುಂಪು Kನಲ್ಲಿ ಪೋರ್ಚುಗಲ್ ಮತ್ತು ಉಜ್ಬೇಕಿಸ್ತಾನ್ ಮುಖಾಮುಖಿಯಾಗಿವೆ. ಈ ಪಂದ್ಯವು ಅಮೆರಿಕದ ಟೆಕ್ಸಾಸ್‌ನಲ್ಲಿರುವ ಹೂಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗ ಪೋರ್ಚುಗಲ್ 3-0 ಅಂತರದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ ಮುನ್ನಡೆ ಸಾಧಿಸಿದೆ.
