– ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭಾವುಕ ಕ್ಷಣ
ಕೋಲ್ಕತ್ತಾ: ಅತ್ಯಾಚಾರ ( Rape case) ಪ್ರಕರಣದಲ್ಲಿ ಸಾವನ್ನಪ್ಪಿದ ತಮ್ಮ ಮಗಳು ಅಭಯಾಳನ್ನು ನೆನೆದು ಬಿಜೆಪಿ (BJP) ಶಾಸಕಿ ರತ್ನಾ ದೇಬ್‌ನಾಥ್ (Ratna Debnath) ಕಣ್ಣೀರು ಹಾಕಿದ ಭಾವುಕ ಘಟನೆ ಇಂದು ಪಶ್ಚಿಮ ಬಂಗಾಳ(West Bengal) ವಿಧಾನಸಭೆಯಲ್ಲಿ ನಡೆಯಿತು.
2024ರಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್‌ನಾಥ್, ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಭಾವುಕರಾದರು.
ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿರುವ ರತ್ನಾ ದೇಬ್‌ನಾಥ್, ತಮ್ಮ ಮಗಳಿಗೆ ನ್ಯಾಯ ಸಿಗಬೇಕು ಎಂದು ಸದನದಲ್ಲಿ ಆಗ್ರಹಿಸಿದರು. ಪ್ರಕರಣದ ತನಿಖೆ ಮತ್ತು ಹೊಣೆಗಾರಿಕೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದರು. ಅವರ ಭಾವನಾತ್ಮಕ ಭಾಷಣ ಸದನದಲ್ಲಿ ಗಮನ ಸೆಳೆಯಿತು.
ಇತ್ತೀಚೆಗೆ ಸಂತ್ರಸ್ತೆಯ ಪೋಷಕರು ಸಿಬಿಐಗೆ ಮಹತ್ವದ ಬೇಡಿಕೆ ಇಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರ ಮೊಬೈಲ್ ಟವರ್ ಲೊಕೇಶನ್ ಘಟನೆ ನಡೆದ ರಾತ್ರಿ ಆಸ್ಪತ್ರೆ ಬಳಿ ಇತ್ತು ಎಂದು ರತ್ನಾ ದೇಬ್‌ನಾಥ್ ಆರೋಪಿಸಿದ್ದಾರೆ. ಅಲ್ಲದೇ, ಅವರು ಬಳಸಿದ ಶೌಚಾಲಯವನ್ನು ಘಟನೆ ಬಳಿಕ ಕೆಡವಲಾಗಿದೆ ಎನ್ನುವ ಆರೋಪವನ್ನೂ ಮಾಡಿದ್ದಾರೆ.
Kolkata, West Bengal: RG Kar victim’s mother & BJP MLA Ratna Debnath breaks down in the Assembly while Chief Minister Suvendu Adhikari was speaking on the RG Kar Hospital incident.
CM Suvendu Adhikari says, “We will track down everyone involved. Justice will be delivered in the… pic.twitter.com/bwP5UbxRwS
— IANS (@ians_india) June 23, 2026
ರತ್ನಾ ದೇಬ್‌ನಾಥ್ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಸಿಬಿಐ ತನಿಖೆಯನ್ನು ವಿಸ್ತರಿಸಿದೆ. ಜೂನ್ ಮಧ್ಯಭಾಗದಲ್ಲಿ ಮಾಜಿ ಟಿಎಂಸಿ ಶಾಸಕ ನಿರ್ಮಲ್ ಘೋಷ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ.
ಪ್ರಕರಣದ ಬಳಿಕ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ತ್ವರಿತವಾಗಿ ನಡೆಸಿ, ಎರಡನೇ ಮರಣೋತ್ತರ ಪರೀಕ್ಷೆ ತಪ್ಪಿಸಲು ಕೆಲ ನಾಯಕರು ಪ್ರಯತ್ನಿಸಿದರು ಎಂದು ಕುಟುಂಬ ಆರೋಪಿಸಿದೆ.ಇದನ್ನೂ ಓದಿ: ಭರತ್ ತಿವಾರಿ ಎನ್‌ಕೌಂಟರ್ ಕೇಸ್ – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್
ಮಗಳ ಸಾವಿನ ಬಳಿಕ ರತ್ನಾ ದೇಬ್‌ನಾಥ್ ರಾಜಕೀಯಕ್ಕೆ ಬಂದರು. ಮಹಿಳಾ ಸುರಕ್ಷತೆ ಮತ್ತು ನ್ಯಾಯದ ಹೋರಾಟವನ್ನು ಪ್ರಮುಖ ವಿಷಯವಾಗಿಸಿಕೊಂಡು 2026ರ ವಿಧಾನಸಭಾ ಚುನಾವಣೆಯಲ್ಲಿ ಪಾನಿಹಾಟಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.ಇದನ್ನೂ ಓದಿ: ಮದುವೆಗೆ 17 ಕೋಟಿ ವೆಚ್ಚದ ಅರಮನೆ ಬುಕ್; ಪ್ರಿ-ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ವರನ ಕೊಂದ ಕಿರಾತಕಿ
