ನವದೆಹಲಿ: ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಅನೇಕ ರಫೇಲ್ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ಪಾಕಿಸ್ತಾನದ ಪುನರಾವರ್ತಿತ ಹೇಳಿಕೆಗೆ ಭಾರತೀಯ ವಾಯುಪಡೆಯ ಅಧಿಕೃತ ದಾಖಲೆಯೊಂದಿಗೆ ಕೌಂಟರ್ ಕೊಟ್ಟಿದೆ.
ಪ್ರಸ್ತುತ ಸೇವೆಯಲ್ಲಿರುವ 36 ರಫೇಲ್ ಜೆಟ್‌ಗಳು ಸೇವೆಯಲ್ಲಿವೆ ಅಂತ ಹೇಳಿದೆ. ಅಲ್ಲದೆ, ಎಲ್ಲಾ 36 ರಫೇಲ್ ಯುದ್ಧ ವಿಮಾನಗಳನ್ನು ಒಳಗೊಂಡ 5 ತಿಂಗಳ ನಿರ್ವಹಣೆಯ ಪ್ಯಾಕೇಜ್‌ಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.
ಈ ಎಲ್ಲಾ ಜೆಟ್‌ಗಳು 2016ರಲ್ಲಿ ಫ್ರಾನ್ಸ್ ಜೊತೆ ಸಹಿ ಹಾಕಿ ಖರೀದಿಸಿದ ಜೆಟ್‌ಗಳಾಗಿವೆ.
