– ಪ್ರಿ-ವೆಡ್ಡಿಂಗ್ ಶೂಟ್ ನೆಪದಲ್ಲಿ ಮರ್ಡರ್ ಪ್ಲ್ಯಾನ್
– ಚೇತನ್ ಜೊತೆ ಬಾಳಲು ಕೇತನ್ ಕೊಲೆ
ಮುಂಬೈ: ಪ್ರಿ-ವೆಡ್ಡಿಂಗ್ ಶೂಟಿಂಗ್ (Pre Wedding Shoot) ನೆಪದಲ್ಲಿ ಮಹಾರಾಷ್ಟ್ರದ(Maharashtra) ಯುವತಿ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ಜೋಡಿಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್‌ನನ್ನು ಮಂಗಳವಾರ ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ತನಿಖೆಗಾಗಿ ಜೂನ್ 29ರವರೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಜೂನ್ 18ರಂದು ಸಿಯಾ ಗೋಯಲ್ ಹುಟ್ಟುಹಬ್ಬ ಆಚರಿಸಲು ಕೇತನ್ ಮತ್ತು ಸಿಯಾ ಲೋಹಗಡ್ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಟ್ರೆಕ್ಕಿಂಗ್ ವೇಳೆ ಕೇತನ್‌ನ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದ. ಮೊದಲಿಗೆ ಇದು ಅಪಘಾತ ಎಂದು ಎಲ್ಲರೂ ಭಾವಿಸಿದ್ದರು. ಫೋಟೋ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಪೊಲೀಸರಿಗೆ ಹೇಳಿದ್ದಳು. ಆದರೆ, ತನಿಖೆ ಮುಂದುವರಿದಂತೆ ಹಲವು ಅನುಮಾನಗಳು ಹುಟ್ಟಿಕೊಂಡವು. ಬಳಿಕ ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದ ಸಿಯಾಗೆ ಕೇತನ್‌ನೊಂದಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದ ಕಾರಣ ಇಬ್ಬರೂ ಸೇರಿ ಕೇತನ್‌ನನ್ನು ಕೊಲೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಇದೇ ಜೂನ್ 14ರಂದು ಕೂಡ ಸಿಯಾ ಮತ್ತು ಕೇತನ್ ಲೋಹಗಡ್ ಕೋಟೆಗೆ ಹೋಗಿದ್ದರು. ಆಗಲೂ ಕೇತನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಮಗನ ಮೃತದೇಹ ಮನೆಗೆ ಬಂದಾಗ ಸಿಯಾ ಮುಖದಲ್ಲಿ ಯಾವುದೇ ದುಃಖ ಕಾಣಿಸಲಿಲ್ಲ ಎಂದು ಕೇತನ್ ತಂದೆ ಹೇಳಿದ್ದಾರೆ.ಇದನ್ನೂ ಓದಿ: ವಿದ್ಯುತ್ ಸರಬರಾಜಲ್ಲಿ ಸಮಸ್ಯೆ – ನೇರಳೆ ಮಾರ್ಗದ ಮೆಟ್ರೋ ಸಂಚಾರ ಬಂದ್
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಯಾ ಮತ್ತು ಚೇತನ್ ವಿರುದ್ಧ ಕೊಲೆ ಹಾಗೂ ಸಂಚು ಆರೋಪದಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಆರ್‌ಜಿ ಕರ್ ಆಸ್ಪತ್ರೆ ಅತ್ಯಾಚಾರ ಸಂತ್ರಸ್ತೆಯ ತಾಯಿ, ಶಾಸಕಿ ರತ್ನಾ ದೇಬ್‌ನಾಥ್ ವಿಧಾನಸಭೆಯಲ್ಲಿ ಕಣ್ಣೀರು
