ಬೆಂಗಳೂರು: ವಿದ್ಯುತ್ ಸರಬರಾಜಲ್ಲಿ ಸಮಸ್ಯೆ ಉಂಟಾಗಿದ್ದು, ನೇರಳೆ ಮಾರ್ಗದ (Metro Purple Line) ಮೆಟ್ರೋ (Namma Metro) ಸಂಚಾರ ಬಂದ್ ಆಗಿದೆ. ಹಲಸೂರು, ಗರುಡಚಾರ್ ಪಾಳ್ಯ , ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ರೈಲುಗಳು ನಿಂತಿವೆ.
ಮೆಟ್ರೋ ಸಂಚಾರ ವ್ಯತ್ಯಯದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರು ಪರದಾಡಿದ್ದಾರೆ. ಸದ್ಯ ಕಬ್ಬನ್ ಪಾರ್ಕ್‌ನಿಂದ ಮೆಜೆಸ್ಟಿಕ್‌ವರೆಗೆ ತಾತ್ಕಾಲಿಕ ಮೆಟ್ರೋ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿಂತ ರೈಲು – ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಯಾವ ಯಾವ ಮೆಟ್ರೋ ನಿಲ್ಲಾಣದಲ್ಲಿ ಸಂಚಾರ ವ್ಯತ್ಯಯ?
– ಕಬ್ಬನ್ ಪಾರ್ಕ್ ನಿಲ್ದಾಣ
– ಡಾ. ಬಿ ಆರ್ ಅಂಬೇಡ್ಕರ್ ನಿಲ್ದಾಣ (ವಿಧಾನಸೌಧ)
– ವಿಶ್ವೇಶ್ವರಯ್ಯ ಸ್ಟೇಷನ್
– ಮೆಜೆಸ್ಟಿಕ್
– ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ
ಎಲ್ಲಾ ಅಂಡರ್ ಗ್ರೌಂಡ್ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ.
ನೇರಳೆ ಮಾರ್ಗದ ಯಾವ್ಯಾವ ನಿಲ್ದಾಣದವರೆಗೆ ಸಂಚಾರ ಇದೆ?
ಮಾಗಡಿ ರಸ್ತೆಯಿಂದ – ಚಲ್ಲಘಟ್ಟದವರೆಗೆ ಮೆಟ್ರೋ ಸಂಚಾರ ಇದೆ. ಎಂಜಿ ರಸ್ತೆಯಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಸಂಚಾರವಿದೆ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಾಗಿಲನ್ನು ಕ್ಲೋಸ್ ಭದ್ರತಾ ಸಿಬ್ಬಂದಿ ಕ್ಲೋಸ್ ಮಾಡಿದ್ದಾರೆ. ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮಾಹಿತಿ ನೀಡಿ ಕಳಿಸುತ್ತಿದ್ದಾರೆ. ಸಾಮಾನ್ಯ ರೈಲು ಸಂಚಾರವನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಪುನಃಸ್ಥಾಪಿಸಲು ಬಿಎಂಆರ್‌ಸಿಎಲ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದನ್ನೂ ಓದಿ: PUBLiC TV Impact| ಬಳ್ಳಾರಿ ವಿವಿ ಸರ್ಟಿಫಿಕೇಟ್ ಹಗರಣ – ಇಬ್ಬರು ಗುತ್ತಿಗೆ ನೌಕರರ ಮೇಲೆ ಕೊನೆಗೂ ಎಫ್ಐಆರ್
