Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏನಿದು ಮಿಷನ್ ಮೌಸಮ್? ಇದು ಹೇಗೆ ಕಾರ್ಯನಿವಹಿಸುತ್ತದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಏನಿದು ಮಿಷನ್ ಮೌಸಮ್? ಇದು ಹೇಗೆ ಕಾರ್ಯನಿವಹಿಸುತ್ತದೆ?

Latest

ಏನಿದು ಮಿಷನ್ ಮೌಸಮ್? ಇದು ಹೇಗೆ ಕಾರ್ಯನಿವಹಿಸುತ್ತದೆ?

Public TV
Last updated: January 20, 2025 8:35 am
Public TV
Share
2 Min Read
Mission Mausam
SHARE

ಹವಾಮಾನದಿಂದಾಗಿ ಪ್ರಪಂಚದಾದ್ಯಂತ ಅನಿರೀಕ್ಷಿತವಾದ ಹಲವಾರು ಬದಲಾವಣೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನಿಖರವಾದ ಹವಾಮಾನ ಮುನ್ಸೂಚನೆಗಾಗಿ ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ `ಮಿಷನ್ ಮೌಸಮ್’ ಎಂಬ ಸಾಧನವನ್ನು ತರಲು ಸಿದ್ಧವಾಗಿದೆ.

ಭಾರತೀಯ ಹವಾಮಾನ ಇಲಾಖೆ 1875 ಜ.15 ರಂದು ಪ್ರಾರಂಭವಾಯಿತು. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಐಎಂಡಿಯ 150ನೇ ಸಂಭ್ರಮಾಚರಣೆಯಲ್ಲಿ `ಮಿಷನ್ ಮೌಸಮ್’ ಅನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಐದು ವರ್ಷಗಳಲ್ಲಿ 2 ಸಾವಿರ ಕೋಟಿ ರೂ.ಗಳಿಂದ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ.

Weather

ಹವಾಮಾನ ಪರಿಸ್ಥಿತಿ, ಪ್ರವಾಹ, ಚಂಡಮಾರುತ, ಅತೀವೃಷ್ಠಿ, ಅನಾವೃಷ್ಠಿ, ಗುಡುಗು ಸೇರಿದಂತೆ ಇನ್ನಿತರ ಮುನ್ಸೂಚನೆ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಕಳೆದ 10 ದಿನಗಳ ಹಾಗೂ ಮುಂದಿನ ಹತ್ತು ದಿನಗಳ ಹವಾಮಾನ ಹೇಗಿರಲಿದೆ ಎಂದು ತಿಳಿಯಬಹುದು. ಜೊತೆಗೆ ಭಾರತವನ್ನು ಕ್ಲೈಮೇಟ್ ಸ್ಮಾರ್ಟ್ ರಾಷ್ಟ್ರವಾಗಿಸಲು ಇದನ್ನು ಜಾರಿಗೆ ತರಲಾಗಿದೆ.

ಮೀನುಗಾರರು, ರೈತರಿಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಮುಂಚೆ ಶೇ.10 ರಷ್ಟು ರೈತರು ಹಾಗೂ ಮೀನುಗಾರರು ಹವಾಮಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುತ್ತಿದ್ದರು. ಆದರೆ ಸದ್ಯ ಈ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಶೇ.50 ರಷ್ಟು ಜನ ಸ್ಮಾರ್ಟ್ಫೋನ್, ವಾಟ್ಸಪ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.

WEATHER

ಇದರ ಸ್ಥಾಪನೆ ಹೇಗೆ?
ಮೊದಲ ಹಂತದ ಭಾಗವಾಗಿ ಸುಮಾರು 70 ಡಾಪ್ಲರ್ ರಾಡಾರ್‌ಗಳು, ಸೂಪರ್ ಕಂಪ್ಯೂಟರ್‌ಗಳು, 10 ವಿಂಡ್ ಪ್ರೊಫೈಲರ್‌ಗಳು ಮತ್ತು 10 ರೇಡಿಯೊಮೀಟರ್‌ಗಳನ್ನು ಮಾರ್ಚ್ 2026ರವರೆಗೆ ಅಳವಡಿಸಲಾಗುವುದು. ಇಲ್ಲಿಯವರೆಗೆ ಭಾರತೀಯ ಹವಾಮಾನ ಇಲಾಖೆಯು 39 ಡಾಪ್ಲರ್ ರಾಡಾರ್‌ಗಳನ್ನು ಸ್ಥಾಪಿಸಿದೆ. ಡಾಪ್ಲರ್ ರಾಡಾರ್‌ಗಳು ಎಂದರೆ ದೂರದಲ್ಲಿನ ಹವಾಮಾನ ಕುರಿತು ದತ್ತಾಂಶ ನೀಡುತ್ತದೆ. ಇದು ಹವಾಮಾನದ ಚಲನೆಯ ಮಾಹಿತಿಯನ್ನು ಒದಗಿಸುತ್ತದೆ.

ಇನ್ನೂ ಎರಡನೇ ಹಂತದಲ್ಲಿ, ವೀಕ್ಷಣಾಲಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹಗಳು ಮತ್ತು ವಿಮಾನಗಳನ್ನು ಬಳಸಲಾಗುತ್ತದೆ. ತಾಪಮಾನ ಹೆಚ್ಚಾದಂತೆ ಮೋಡಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಪುಣೆಯ ಭಾರತೀಯ ಹವಾಮಾನ ಸಂಸ್ಥೆಯಲ್ಲಿ ಕ್ಲೌಡ್ ಚೇಂಬರ್ ಸ್ಥಾಪಿಸಲಾಗುವುದು. ಇದು ಮುಂದಿನ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಹಂತಗಳಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

WEATHER 1

ಒಟ್ಟಾರೆಯಾಗಿ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಗಳ ನಿಖರತೆಯನ್ನು ಶೇ.5 ರಿಂದ 10ಕ್ಕೆ ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಜೊತೆಗೆ ಇದು ಗ್ರಾಮೀಣ ಪ್ರದೇಶಗಳಿಗೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಕೃಷಿಗೆ ಅಗತ್ಯವಾದ, ನಿಖರವಾದ ಮುನ್ಸೂಚನೆಗಳನ್ನು ಒದಗಿಸುವ ನಿರೀಕ್ಷೆಯಿದೆ.

ಇನ್‌ಸ್ಟಂಟ್ ಎಸ್ಟಿಮೇಟ್ಸ್ ಪ್ರಕಾರ ಸದ್ಯ ಮೂರು ಗಂಟೆಗಳ ಮೊದಲಿನ ಹವಾಮಾನ ಪರಿಸ್ಥಿತಿಯನ್ನು ತಿಳಿಸುತ್ತದೆ. ಈ ಯೋಜನೆಯ ಮೂಲಕ ಒಂದು ಗಂಟೆಗೆ ಇಳಿಸುವ ನಿರೀಕ್ಷೆಯನ್ನು ಹೊಂದಿದೆ. ಭಾರತೀಯ ಹವಾಮಾನ ಇಲಾಖೆ, ಉಷ್ಣವಲಯದ ಹವಾಮಾನ ಶಾಸ್ತ್ರದ ಕೇಂದ್ರ ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ಕೇಂದ್ರ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತವೆ.

TAGGED:IMDindiaIndian Meteorological DepartmentMission Mausampm narendra modiWeather Instant EstimateWeather Updateಪ್ರಧಾನಿ ನರೇಂದ್ರ ಮೋದಿಭಾರತೀಯ ಹವಾಮಾನ ಇಲಾಖೆಮಿಷನ್ ಮೌಸಮ್ಹವಾಮಾನಹವಾಮಾನ ಮುನ್ಸೂಚನೆ
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

Ballary Bear Captured
Bellary

Automatic Mobile App Based Cage locking System ಬಳಿಸಿ ಜಿಂದಾಲ್‌ನಲ್ಲಿದ್ದ ಮೂರು ಕರಡಿ ಸೆರೆ

Public TV
By Public TV
4 minutes ago
ಸಾಂದರ್ಭಿಕ ಚಿತ್ರ
Latest

ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಭಾರೀ ಇಳಿಕೆ!

Public TV
By Public TV
40 minutes ago
pm modi mann ki baat
Bengaluru City

ಮಧ್ಯಪ್ರಾಚ್ಯ ಬಿಕ್ಕಟ್ಟು: ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಸಭೆ

Public TV
By Public TV
57 minutes ago
Kurubarahalli Accident
Bengaluru City

ಸ್ಟೀಲ್ ಸಾಗಿಸ್ತಿದ್ದ ಲಾರಿ ಕಾರಿಗೆ ಡಿಕ್ಕಿ – ಗುದ್ದಿದ ರಭಸಕ್ಕೆ ಗುಜರಿ ಗೋಡೌನ್ ಬೆಂಕಿಗಾಹುತಿ, ವ್ಯಕ್ತಿ ಸಾವು

Public TV
By Public TV
1 hour ago
Shivamogga
Districts

ಆಗುಂಬೆ ಘಾಟ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಸಂಚಾರ ಬಂದ್

Public TV
By Public TV
2 hours ago
Iran Foreign Minister Abbas Araghchi
Latest

ಶತ್ರುಗಳಿಗೆ ಹಾರ್ಮುಜ್‌ ಜಲಸಂಧಿ ನಿರ್ಬಂಧಿಸುವುದು ಇರಾನ್‌ನ ಕಾನೂನುಬದ್ಧ ಹಕ್ಕು: ವಿಶ್ವಸಂಸ್ಥೆಯಲ್ಲಿ ಅರಘ್ಚಿ ಮಾತು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?