ಮಂಡ್ಯ/ಮೈಸೂರು: ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ (CM Siddaramaiah) ಅವರ ತಪ್ಪಿಲ್ಲ. ಮರಿಗೌಡ ( M H Marigowda) ಅಡ್ಡದಾರಿ ಮಾಡಿರುವುದರಿಂದ ಈ ಕಳಂಕ ಬಂದಿದೆ ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಮೈಸೂರಿನ (Mysuru) ಸಿದ್ದರಾಮನ ಹುಂಡಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕರಿಯಪ್ಪ, ಮರಿಗೌಡ ಮಾಡಿರುವ ಕೆಲಸದಿಂದ ಹೀಗೆ ಆಗಿದೆ. ಅವನಿಗೆ ನಮ್ಮವರು ಸರಿಯಾಗಿ ಮಾಡುತ್ತಾರೆ. ಸಿಎಂ ಬಳಿ ಇರುವವರೇ ಈ ತಪ್ಪು ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬಾರದು ಒಂದು ವರ್ಷ ಬೇಕಾದರು ತನಿಖೆ ಮಾಡಲಿ. ದುರಾದೃಷ್ಟಕ್ಕೆ ಈ ಕೆಲಸ ಆಗಿದೆ ಎಂದರು. ಇದನ್ನೂ ಓದಿ: ಜಗ್ಗಲ್ಲ, ಬಗ್ಗಲ್ಲ ಅಂದೋರು ಸೈಟ್ ವಾಪಸ್ ಮೂಲಕ ಜಗ್ಗಿದ್ಯಾಕೆ?: ಛಲವಾದಿ ನಾರಾಯಣಸ್ವಾಮಿ ಲೇವಡಿ
ಈಗ ಸಿಎಂಗೆ ತೊಂದರೆ ಆಗಬಾರದು ಎಂದು ಅಮ್ಮನವರು ಸೈಟ್ ವಾಪಸ್ ಕೊಟ್ಟಿದ್ದಾರೆ. ಅಮ್ಮನವರು ಮುಡಾ ಕೇಸ್‌ನಿಂದ (MUDA Scam Case) ನೊಂದಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೋದರೂ ಅವರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಎಲ್ಲೂ ಕಾಣಿಸಿಕೊಂಡವರಲ್ಲ. ನಮ್ಮೂರಿನವರು ಅವರನ್ನು ನೋಡಿರುವುದು ಜಾತ್ರೆಯಲ್ಲಿ ಅಷ್ಟೇ. ನಮ್ಮ ಸಾಹೇಬರು ಅವರನ್ನು ಎಲ್ಲೂ ಕರೆದುಕೊಂಡು ಹೋಗಿಲ್ಲ. ಯಜಮಾನರಿಗೆ ತೊಂದರೆ ಆಗಬಾರದೆಂದು ಕುಂಕುಮಕ್ಕೆ ಬಂದಿದ್ದು ವಾಪಸ್ಸು ಕೊಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರೇಪ್ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು