ಬಳ್ಳಾರಿ: ಮೂರು 3.50 ಲಕ್ಷ ಲಂಚ ಪಡೆಯುವ ವೇಳೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (Ballari Urban Development Authority) ಭ್ರಷ್ಟ ಅಧಿಕಾರಿಯೊಬ್ಬ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾನೆ.
ನಗರಾಭಿವೃದ್ಧಿ ಪ್ರಾಧಿಕಾರದ ಸರ್ವೇಯರ್ ಶಾಂತಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಲೇಔಟ್ ಪ್ಲ್ಯಾನ್ ಡೆವಲಪ್ಮೆಂಟ್ ಅಪ್ರೂವಲ್ ಮಾಡಲು ಈರೇಶ್ ಎಂಬವರ ಬಳಿ ಸರ್ವೇಯರ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈರೇಶ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ಮಂಡ್ಯ ಜಿ.ಪಂ ಸಿಇಒ ಕಾರು ಅಪಘಾತ – ಕೂದಲೆಳೆ ಅಂತರದಲ್ಲಿ ಪಾರು
ಶಾಂತಮೂರ್ತಿ ಪರವಾಗಿ ಮೊಹಮ್ಮದ್ ಸಾಜೀದ್ ಎಂಬಾತ ಈರೇಶ್‌ನಿಂದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ಪೊಲೀಸ್ ಇನ್‌ಸ್ಪೆಕ್ಟರ್‌ನಿಂದಲೇ 20 ಲಕ್ಷ ರಾಬರಿ ಆರೋಪ – ಹೋಟೆಲ್‌ಗೆ ನುಗ್ಗಿ ಹಣ ಕಸಿದು ಜೀಪ್ ಸಮೇತ ಎಸ್ಕೇಪ್
