Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ಯಾಂಡಲ್ ವುಡ್ ಗೆ ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸ್ಯಾಂಡಲ್ ವುಡ್ ಗೆ ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ

Cinema

ಸ್ಯಾಂಡಲ್ ವುಡ್ ಗೆ ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ

Public TV
Last updated: September 27, 2024 6:07 pm
Public TV
Share
3 Min Read
Mincuhulu 3
SHARE

ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಮಿಂಚುಹುಳು (Mincuhulu)ಹೆಸರಿನ ಸಿನಿಮಾದಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿರುವ  ಈ  ಚಿತ್ರಕ್ಕೆ ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಅವರು  ಬಂಡವಾಳ ಹಾಕಿದ್ದು , ವಿಜಯ್ ಕುಮಾರ್ ಮತ್ತು  ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ   ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ತಮ್ಮ ಊರಿನವರೇ ಆದ ನಿರ್ಮಾಪಕರ ಜೊತೆ ಹೆಗಲಾಗಿ ನಿಂತು ಈ ಚಿತ್ರ ನಿರ್ಮಾಣದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.

Mincuhulu 2

ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ  ನಾದಬ್ರಹ್ಮ ಹಂಸಲೇಖಾ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ.ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್,‌ ರಾಜ್ ಪುತ್ರಿಯರಾದ ಶ್ರೀಮತಿ ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಚಿತ್ರವನ್ನು ವೀಕ್ಷಿಸಿದರು. ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದ್ದು,  ಬೇವಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ಬದುಕಿನ ವೈರುದ್ಯ,  ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ  ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.

Mincuhulu 1

ಮುಖ್ಯವಾಗಿ ಈ ಚಿತ್ರ ಆಗಲು ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಕಂಟೆಂಟ್ ಓರಿಯೆಂಟ್ ಚಿತ್ರಗಳ ಅಗತ್ಯತೆ ತುಂಬಾ ಇದೆ. ಅಂಥಾ ಮತ್ತೊಂದು ಚಿತ್ರವಿದು‌. ಒಳ್ಳೇ ಸಿನಿಮಾನ ಬೆಂಬಲಿಸಿ ಎಂದರು ನಿರ್ದೇಶಕರು ಬಾಲನಟ ಪ್ರೀತಂ ಕೊಪ್ಪದ  ಮಾತನಾಡಿ  ನಮ್ಮ  ಚಿತ್ರ ನಾಲ್ಕನೇ ತಾರೀಕು ಚಿತ್ರ ಬಿಡುಗಡೆಯಾಗುತ್ರಿದೆ ಎಲ್ಲರೂ ಚಿತ್ರ ನೋಡಿ ಸಹಕರಿಸಿ ಎಂದರು.  ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಮಾತನಾಡಿ, ಚಿತ್ರದಲ್ಲಿ  ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ‌ ನಿಲ್ಲುವ ಪಾತ್ರ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಬೆಂಬಲ ಬೇಕು ಎಂದು ಕೇಳಿಕೊಂಡರು. ನಿರ್ಮಾಪಕ ರಾಜ್ ಗೋಪಾಲ್ ಮಾತನಾಡಿ, ನಾನು ಸಿನಿಮಾ ಮಾಡಬೇಕೆಂದುಕೊಂಡಿರಲಿಲ್ಲ. ಬಾಲ್ಯದ ಗೆಳೆಯ ರುಕ್ಕೋಜಿ ಅವರು ಈ ಥರದ ಒಂದು ಕಥೆ ಇದೆ, ಸಿನಿಮಾ  ಮಾಡೋಣ ಅಂದರು. ಎಲ್ಲರೂ ಸೇರಿ ಈ ಚಿತ್ರ ಮಾಡಿದ್ದೇವೆ‌. ನೋಡಿ ಆಶೀರ್ವಾದ ಮಾಡಿ ಎಂದು ಕೇಳಿಕೊಂಡರು.

 

ಹಿರಿಯ ನಟಿ ಜಯಮಾಲಾ ಮಾತನಾಡಿ ವರದಪ್ಪ ಅವರ ಅಳಿಯ ಮಕ್ಕಳ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಮಗ ನಟಿಸಿದ್ದಾರೆ‌, ಮಕ್ಕಳು ಯಾವ ರೀತಿ ವಿಕಾಸ ಹೊಂದುತ್ತಾರೆ ಅನ್ನೋದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ, ಮಕ್ಕಳ ಚಿತ್ರಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಬೇಕು ಎಂದರು. ಹಂಸಲೇಖಾ ಮಾತನಾಡಿ ಜಯಮಾಲಾ ಅವರು ಮಕ್ಕಳ ಚಿತ್ರ ಮಾಡಿದರೆ ಏನು ಸಮಸ್ಯೆ ಇದೆ, ಹೇಗೆ ರಿಲೀಸ್ ಮಾಡಬೇಕೆಂದು ತಿಳಿಸಿದ್ದಾರೆ. ರುಕ್ಕೋಜಿ ಮೊದಲು ಈ ಹುಳ ಬಿಟ್ಟಿದ್ದು. ಈ ಸಿನಿಮಾ ನೋಡುವಾಗ ನನಗೆ ಪಂತುಲು ನೆನಪಾದರು. ಆ ಮಗು  ಸಮಸ್ಯೆಗಳ ನಡುವೆ ಬೆಳೆಯಲು ಹೊರಟಿದ್ದು

ಖುಷಿಯಾಯ್ತು. ಮಕ್ಕಳ‌ ಮುಂದೆ ಸವಾಲುಗಳನ್ನು ಇಡಿ, ಅವರಿಗೆ ಕುತೂಹಲ ಬೆಳೆಸಿ. ಅವರು ಕೇಳದೆ ಏನನ್ನೂ ಕೊಡಬೇಡಿ, ವರದಪ್ಪ ಅವರು ಒಂದು ಭಾಷಣ ಮಾಡಿದ್ದು ನಾನು ಎಂದೂ ನೋಡಿಲ್ಲ. ಹಿಂದೆನಿಂತು ನೋಡಿಕೊಳ್ತಿದ್ದರು. ರಾಜಣ್ಣ ಅವರನ್ನು ಭೂಮಿತೂಕದ ವ್ಯಕ್ತಿ ಅಂತಿದ್ದರು. ಈಗ ಅವರ ಮೊಮ್ಮಗ ಬೇರಿನೆಡೆಗೆ ಹೊರಟಿದ್ದಾನೆ ಎಂದು ಹೇಳಿದರು. ನಿರ್ದೇಶಕ ಪಿ.ಶೇಷಾದ್ರಿ ಮಾತನಾಡುತ್ತ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಿನಿಮಾ ತೋರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.ಸರ್ಕಾರ ಅನುಮತಿ ಕೊಡಬೇಕು. ನೂರು ಮಕ್ಕಳು ಈ ಸಿನಿಮಾ ನೋಡಿದರೆ ಅದರಲ್ಲಿ ಹತ್ತು ಮಕ್ಕಳ‌ಮನೋಭಾವ ಬದಲಾಗುತ್ತೆ. ಮುಖ್ಯವಾಗಿ ದೊಡ್ಡವರು ಈ ಸಿನಿಮಾ ನೋಡಬೇಕು ಎಂದು ಹೇಳಿದರು. ಲಹರಿ ಸಂಸ್ಥೆಯ ವೇಲು, ನಿವೃತ್ತ  ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ, ಶಾಸಕ ಶರತ್ ಬಚ್ಚೇಗೌಡ,  ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್, ಸಹ ನಿರ್ಮಾಪಕ ರಫೀಕ್ ಉಲ್ಲಾ  ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.

TAGGED:MincuhuluPrithvirajsandalwoodಪೃಥ್ವಿರಾಜ್ಮುಂಚುಹುಳುಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Tamanna Bhatia
ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ
Bengaluru City Cinema Districts Karnataka Latest Main Post
Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories

You Might Also Like

T20WorldCup Scotland
Cricket

T20 World Cup – ಇಟಲಿ ವಿರುದ್ಧ 73 ರನ್‌ಗಳ ಭರ್ಜರಿ ಜಯಗಳಿಸಿದ ಸ್ಕಾಟ್ಲೆಂಡ್

Public TV
By Public TV
36 minutes ago
Ramalinga Reddy
Bengaluru City

ಕೇಂದ್ರದಿಂದಲೇ ಮೆಟ್ರೋ ಟಿಕೆಟ್‌ ದರ ಹೆಚ್ಚಳ, ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ರಾಮಲಿಂಗಾರೆಡ್ಡಿ

Public TV
By Public TV
43 minutes ago
DK Shivakumar 1 1
Bengaluru City

ದೆಹಲಿಗೆ ಹೋಗೋದು ರಾಜಕಾರಣ; ಹೈಕಮಾಂಡ್ ನಾಯಕರೊಬ್ಬರು ಕರೆದಿದ್ದಾರೆ – ಡಿಕೆಶಿ

Public TV
By Public TV
55 minutes ago
R Ashok
Bengaluru City

ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ವಾಪಸ್ ಪಡೆಯಬೇಕು – ಆರ್.ಅಶೋಕ್ ಆಗ್ರಹ

Public TV
By Public TV
1 hour ago
Zimbabwe
Cricket

T20 World Cup: ಮಿಂಚಿದ ಜಿಂಬಾಬ್ವೆ ಬೌಲರ್ಸ್‌ – ಒಮನ್‌ ವಿರುದ್ಧ 8 ವಿಕೆಟ್‌ಗಳ ಜಯ

Public TV
By Public TV
1 hour ago
Om Birla
Latest

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?