Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಜೆಟ್‌ ಮಂಡನೆಗೂ ಮುನ್ನ ‘ಹಲ್ವಾ’ ಸಮಾರಂಭ ನಡೆಯೋದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಜೆಟ್‌ ಮಂಡನೆಗೂ ಮುನ್ನ ‘ಹಲ್ವಾ’ ಸಮಾರಂಭ ನಡೆಯೋದು ಯಾಕೆ?

Latest

ಬಜೆಟ್‌ ಮಂಡನೆಗೂ ಮುನ್ನ ‘ಹಲ್ವಾ’ ಸಮಾರಂಭ ನಡೆಯೋದು ಯಾಕೆ?

Public TV
Last updated: July 21, 2024 6:16 pm
Public TV
Share
3 Min Read
halwa ceremony
SHARE

ಕೇಂದ್ರ ಬಜೆಟ್-2024 (Union Budget 2024) ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡಿಸಲು ಸಜ್ಜಾಗಿದೆ. ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮಂಗಳವಾರ (ಜು.16) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ‘ಹಲ್ವಾ ಸೆರೆಮನಿ’ (ಹಲ್ವಾ ಕಾರ್ಯಕ್ರಮ) ನಡೆಸಿಕೊಟ್ಟರು.

ಬಜೆಟ್ ಮಂಡನೆಗೂ ಮುನ್ನ ಹಲ್ವಾ ಹಂಚುವುದು ಏಕೆ? ಏನಿದು ಹಲ್ವಾ ಸೆರೆಮನಿ? (Halwa Ceremony) ಯಾರಿಗೆ ಹಲ್ವಾ ಹಂಚುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಅದೇನು ಅಂತಾ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಅಂದು ರಾಹುಲ್‌ ಗಾಂಧಿ, ಇಂದು ದೀದಿ – ಜೋರು ಮಳೆಯಲ್ಲೂ ಅಬ್ಬರದ ಭಾಷಣ

NIRMALA SITHARAMAN.1png

ಯಾವುದೇ ಶುಭಕಾರ್ಯಕ್ಕೆ ಸಿಹಿ ಹಂಚುವುದು ಸಂಪ್ರದಾಯ. ಸಿಹಿ ತಿಂಡಿಗಳನ್ನು ತಯಾರಿಸಿ ಹಂಚುವುದು ಅನೇಕ ಭಾರತೀಯ ಸಮಾರಂಭಗಳು ಮತ್ತು ಹಬ್ಬಗಳ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಬಜೆಟ್ ಮಂಡನೆ ಕಾರ್ಯದಲ್ಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂಬುದು ಹಲವರ ಭಾವನೆ. ಅದರ ಹೊರತಾಗಿ ಇನ್ನೊಂದು ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ. ಬಜೆಟ್ ಗೌಪ್ಯತೆ ಕಾಪಾಡುವುದೇ ಆ ಉದ್ದೇಶ.

ಏನಿದು ಹಲ್ವಾ ಸೆರೆಮನಿ?
ಬಜೆಟ್ ಅಧಿವೇಶನಕ್ಕೆ 8-10 ದಿನಗಳ ಮೊದಲು ಹಣಕಾಸು ಇಲಾಖೆ ‘ಹಲ್ವಾ’ ಸಮಾರಂಭ ಆಯೋಜಿಸುತ್ತದೆ. ದೊಡ್ಡ ಬಾಣಲೆಯಲ್ಲಿ ತಯಾರಿಸಿದ ಹಲ್ವಾವನ್ನು ಕೇಂದ್ರ ಸಚಿವರು ಹಂಚುತ್ತಾರೆ. ಇದನ್ನೂ ಓದಿ: ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್‌ ವಿರುದ್ಧ ಆಕ್ರೋಶ

budget halwa sitharaman

ಹಂಚುವುದು ಏಕೆ?
ಈ ಕಾರ್ಯದ ಹಿಂದಿನ ಚಾರಿತ್ರಿಕ ಹಿನ್ನೆಲೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಸಿಹಿ ಹಂಚುವುದು ಸಂಪ್ರದಾಯ. ಅದರಂತೆ ಇಲ್ಲೂ ಕೂಡ ಬಜೆಟ್ ಮಂಡನೆಗೂ ಮೊದಲು ಹಲ್ವಾ ಸೆರೆಮನಿ ನಡೆಯುತ್ತದೆ. ಹಣಕಾಸು ಇಲಾಖೆಯ ಸಿಬ್ಬಂದಿಯನ್ನು ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸಲು ನೀಡುವ ಚಾಲನೆಯೇ ‘ಹಲ್ವಾ’ ಸೆರೆಮನಿ ಎಂದರ್ಥ.

ಯಾರಿಗೆ ಹಂಚುತ್ತಾರೆ ಹಲ್ವಾ?
ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಲಾಗುತ್ತದೆ. ಈ ಸಮಾರಂಭ ಆದ ಬೆನ್ನಲ್ಲೇ ಅವರು ಬಜೆಟ್ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್‌ ಪತ್ತೆ – 14ರ ಬಾಲಕನಿಗೆ ಸೋಂಕು

ಬಜೆಟ್ ಗೌಪ್ಯತೆ ಕಾಪಾಡಲು ಹಲ್ವಾ ಸಮಾರಂಭ?
ಹೌದು, ಬಜೆಟ್‌ಗೆ ಸಂಬಂಧಿಸಿದ ಮಾಹಿತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ಹಣಕಾಸು ಇಲಾಖೆ ಸಿಬ್ಬಂದಿ ಒಂದು ಕಡೆ ಬಂಧಿಯಾಗುತ್ತಾರೆ. ಬಜೆಟ್ ಮಂಡಿಸುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಯಾರನ್ನೂ ಸಂಪರ್ಕಿಸುವಂತಿಲ್ಲ. ಬಾಹ್ಯ ಜಗತ್ತಿನ ಸಂಪರ್ಕವೇ ಅವರಿಗೆ ಇಲ್ಲದಂತೆ ಮಾಡಲಾಗುತ್ತದೆ. ಫೋನ್, ಇ-ಮೇಲ್ ಯಾವುದನ್ನೂ ಬಳಸಲು ಅವಕಾಶ ಇರುವುದಿಲ್ಲ. ಮನೆಯವರನ್ನಾಗಲಿ ಅಥವಾ ನೆರೆಹೊರೆಯವರನ್ನಾಗಲಿ ಸಂಪರ್ಕಿಸುವ ಹಾಗಿಲ್ಲ. ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್‌ನ ತಳ ಅಂತಸ್ಥಿನ ಕಚೇರಿಗೆ ಸ್ಥಳಾಂತರಗೊಳ್ಳುತ್ತಾರೆ.

new parliament building 2

ಗೌಪ್ಯತೆ ಯಾಕೆ?
1950 ರ ವರೆಗೆ ಬಜೆಟ್ ಪ್ರತಿಗಳು ರಾಷ್ಟ್ರಪತಿ ಭವನದಲ್ಲೇ ಮುದ್ರಣಗೊಳ್ಳುತ್ತಿದ್ದವು. ಆದರೆ ಪ್ರತಿಗಳು ಮತ್ತು ಮಾಹಿತಿ ಸೋರಿಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್‌ಗೆ ಮುದ್ರಣ ಕಾರ್ಯ ಸ್ಥಳಾಂತರಗೊಂಡಿತು. ಆಗಿನಿಂದಲೂ ಅಲ್ಲಿಯೇ ಮುದ್ರಣ ನಡೆಯುತ್ತಿದೆ.

ಹಣಕಾಸು ಸಚಿವರ ತಲೆದಂಡ!
1950 ರಲ್ಲಿ ಬಜೆಟ್ ಸೋರಿಕೆಯಾಗಿತ್ತು. ಪರಿಣಾಮವಾಗಿ ಆಗಿನ ಹಣಕಾಸು ಸಚಿವರಾಗಿದ್ದ ಜಾನ್ ಮಥಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಆಗಿನಿಂದ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗಿದೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

ಕೇಂದ್ರ ಬಜೆಟ್ ಮುದ್ರಣವಾಗೋದು ಎಲ್ಲಿ?
ನಾರ್ತ್ ಬ್ಲಾಕ್‌ನ ನೆಲಮಾಳಿಗೆಯು 1980 ರಿಂದ 2020 ರವರೆಗೆ 40 ವರ್ಷಗಳ ಕಾಲ ಬಜೆಟ್ ದಾಖಲೆಗಳನ್ನು ಮುದ್ರಿಸಲು ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ರಿಂಟಿಂಗ್ ಪ್ರೆಸ್ ಅನ್ನು ಹೊಂದಿದೆ.

TAGGED:Halwa CeremonyNirmala SitharamanUnion Budget 2024ಕೇಂದ್ರ ಬಜೆಟ್‌ 2024ನಿರ್ಮಲಾ ಸೀತಾರಾಮನ್ಹಲ್ವಾ ಸಮಾರಂಭ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Davanagere By Election Our leaders have been cornered Ulemas slams Karnataka Congress govt
Bengaluru City

ನಮ್ಮ ನಾಯಕರನ್ನು ಮೂಲೆಗೆ ಸೇರಿಸಿದ್ದಾರೆ: ಕಾಂಗ್ರೆಸ್‌ ವಿರುದ್ಧ ಉಲೇಮಾಗಳು ಕಿಡಿ

Public TV
By Public TV
51 seconds ago
DOVE
Bengaluru City

ಪಾರಿವಾಳದ ವಿಚಾರಕ್ಕೆ ಗಲಾಟೆ – ಚಾಕು ಇರಿದು ಯುವಕನ ಹತ್ಯೆ

Public TV
By Public TV
12 minutes ago
submarine cable 1
Latest

ಡಿಜಿಟಲ್ ಹೆದ್ದಾರಿಯನ್ನೇ ಕತ್ತರಿಸುತ್ತೇವೆ – ವಿಶ್ವಕ್ಕೆ ಇರಾನ್‌ ಬೆದರಿಕೆ | ಭಾರತಕ್ಕೆ ಏನು?

Public TV
By Public TV
54 minutes ago
KOMUL
Districts

ಕೋಮುಲ್ ಕಚೇರಿ ಮೇಲೆ ದಿಢೀರ್ ʻಲೋಕಾʼ ದಾಳಿ – ದಾಖಲೆಗಳ ಪರಿಶೀಲನೆ

Public TV
By Public TV
1 hour ago
Dharwad MLA vinay Kulkarni sentenced to life imprisonment Lesson of Rajadharma in Judgment Upanishad Quotation Judge Santosh Gajanan Bhat
Court

ವಿನಯ್‌ ಕುಲಕರ್ಣಿಗೆ ಜೀವಾವಧಿ |ತೀರ್ಪಿನಲ್ಲಿ ರಾಜಧರ್ಮದ ಪಾಠ – ಉಪನಿಷತ್ ಸಾರ ಉಲ್ಲೇಖ

Public TV
By Public TV
2 hours ago
SSLC Exams
Bagalkot

ನಾಳೆ SSLC ಫಲಿತಾಂಶ ಪ್ರಕಟ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?