Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಸವಾರಿ’ ಮುಗಿಸಿದ `ಬಲರಾಮ’ – 14 ಬಾರಿ ದಸರಾ ಅಂಬಾರಿ ಹೊತ್ತ ಆನೆಗೆ ಕಣ್ಣೀರ ವಿದಾಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | `ಸವಾರಿ’ ಮುಗಿಸಿದ `ಬಲರಾಮ’ – 14 ಬಾರಿ ದಸರಾ ಅಂಬಾರಿ ಹೊತ್ತ ಆನೆಗೆ ಕಣ್ಣೀರ ವಿದಾಯ

Districts

`ಸವಾರಿ’ ಮುಗಿಸಿದ `ಬಲರಾಮ’ – 14 ಬಾರಿ ದಸರಾ ಅಂಬಾರಿ ಹೊತ್ತ ಆನೆಗೆ ಕಣ್ಣೀರ ವಿದಾಯ

Public TV
Last updated: May 9, 2023 7:35 am
Public TV
Share
2 Min Read
balarama elephant 1
SHARE

– ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು ಬಲರಾಮನ ಅಂತ್ಯಕ್ರಿಯೆ

ಮೈಸೂರು: ಅನಾರೋಗ್ಯದಿಂದ ಅಸುನೀಗಿದ್ದ ದಸರಾ ಆನೆ ಬಲರಾಮ (Balarama Elephant) ಮಣ್ಣಲ್ಲಿ ಮಣ್ಣಾಗಿದ್ದಾನೆ. 14 ಬಾರಿ ದಸರಾ ಕ್ಯಾಪ್ಟನ್ ಆಗುವ ಜವಾಬ್ದಾರಿ ನಿರ್ವಹಿಸಿದ್ದ ಬಲರಾಮನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಸತತ 14 ವರ್ಷ ದಸರಾ (Mysuru Dasara) ಅಂಬಾರಿಯನ್ನ ಹೊತ್ತು ಸಾಗಿದ್ದ ಹಿರಿಯ ಆನೆ ಬಲರಾಮ ಇಹಲೋಕ ತ್ಯಜಿಸಿದ್ದು, ಹಿರಿಯ ಜೀವಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾರದ ಮನಸ್ಸಿನಿಂದಲೇ ಅಂತಿಮ ವಿದಾಯ ಹೇಳಲಾಗಿದೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ

balarama elephant

ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ (Nagarahole Forest) ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಅರಣ್ಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಹಲವು ದಿನಗಳಿಂದ ಆಹಾರ, ನೀರು ಸೇವಿಸಿದರೂ ವಾಂತಿ ಮಾಡುತ್ತಿರುವುದಾಗಿ ಕಾವಾಡಿ ತಿಳಿಸಿದ ಮೇರೆಗೆ ಪಶುವೈದ್ಯಾಧಿಕಾರಿಗಳು ಬಲರಾಮನನ್ನು ಪರೀಶಿಲಿಸಿದಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು, ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆಯ ನಂತರವು ಸುಧಾರಣೆ ಕಾಣದ ಕಾರಣ ಎಂಡೋಸ್ಕೋಪಿ ಮಾಡಿ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಿದ ನಂತರ ಬಲರಾಮನಿಗೆ ಕ್ಷಯರೋಗ ಇರುವುದಾಗಿ ವೈದ್ಯಾಧಿಕಾರರಿಗಳು ತಿಳಿಸಿದ್ದರು. ನಂತರ ಚಿಕಿತ್ಸೆಯನ್ನು ಮುಂದುವರೆಸಿದ್ದು, ಆನೆಯು ಯಾವುದೇ ಆಹಾರ, ನೀರು ಸೇವಿಸಲಾಗದೇ ಇದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಮೃತಪಟ್ಟಿದೆ. ಇದನ್ನೂ ಓದಿ: ಮೈಸೂರು ದಸರಾ ಆನೆ ಬಲರಾಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

balarama elephant

ಇನ್ನೂ ಬಲರಾಮ ಅತ್ಯಂತ ಶಕ್ತಿಶಾಲಿ ಆನೆ. ದೈತ್ಯ ಜೀವಿಯಾದ್ರು ಅತ್ಯಂತ ಮೃದು ಸ್ವಭಾವಿ ಕೂಡ ಹೌದು. ಬಲರಾಮ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಬಲರಾಮ ತನ್ನ ಕ್ಯಾಂಪ್‌ನಲ್ಲಿದ್ದ ಚಿಕ್ಕಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಬಲರಾಮನ ಸಾವಿನಿಂದ ಭೀಮನಕಟ್ಟೆ ಆನೆ ಶಿಬಿರದಲ್ಲಿ ಶೋಕ ಮಡುಗಟ್ಟಿದೆ. ಬಲರಾಮನ ಅಂತ್ಯ ಸಂಸ್ಕಾರದ ವೇಳೆ ಮಾವುತ, ಅರಣ್ಯ ಇಲಾಖೆಯ ಸಿಬ್ಬಂದಿ, ಪಶು ವೈದ್ಯರು ಭಾವುಕರಾಗಿದ್ದರು. ಸೌಮ್ಯ ಸ್ವಭಾವದ ಬಲರಾಮನನ್ನು ನೆನೆದು ಸಿಬ್ಬಂದಿ ವರ್ಗ ಕೆಲಕಾಲ ಗದ್ಗರಿತರಾದರು.

mysuru dasara 2022

ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮನನ್ನ ಅರಣ್ಯ ಇಲಾಖೆ ಸೋಮವಾರಪೇಟೆ ತಾಲೂಕಿನ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1987 ರಲ್ಲಿ ಸೆರೆ ಹಿಡಿಯಲಾಗಿತ್ತು. ಅಧಿಕಾರಿಗಳು ಮಾತ್ರವಲ್ಲದೇ, ಸಾರ್ವಜನಿಕರ ಗಮನ ಸೆಳೆದಿದ್ದ ಬಲರಾಮ, 1999 ರಿಂದ 2011ರ ವರೆಗೆ ಸತತ 14 ಬಾರಿ ಚಿನ್ನದ ಅಂಬಾರಿ ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪ ವರೆಗೂ ಹೊತ್ತು, ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಅದಾದ ಬಳಿಕ ಅನೇಕ ವರ್ಷಗಳ ಕಾಲ ದಸರಾ ಜಂಬೂ ಸವಾರಿ ಪಡೆಯ ತಂಡದ ಸದಸ್ಯನಾಗಿ ಕೂಡ, ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ. ಸೋಮವಾರ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಣಸೂರು ವನ್ಯಜೀವಿ ವಲಯದ ಭೀಮನ ಕಟ್ಟೆ ಆನೆ ಕ್ಯಾಂಪ್ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭಾನುವಾರವಷ್ಟೇ ಬಲರಾಮ ಆನೆ ಮೃತಪಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಬಲರಾಮ ಆನೆಗೆ ನಿಧನಕ್ಕೆ ಸಂತಾಪ ಸೂಚಿಸಿದ್ದರು.

TAGGED:Balarama Elephantmysuru dasaraMysuru Forest DepartmentNagarahole Forestಆನೆನಾಗರಹೊಳೆ ಅರಣ್ಯಬಲರಾಮಮೈಸೂರು ದಸರಾ
Share This Article
Facebook Whatsapp Whatsapp Telegram

Cinema news

Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories

You Might Also Like

Jharkhand Ranchi Air Ambulence Crash
Latest

ಜಾರ್ಖಂಡ್‌ನ ರಾಂಚಿಯಲ್ಲಿ ಏರ್ ಅಂಬುಲೆನ್ಸ್ ಪತನ

Public TV
By Public TV
3 hours ago
ICC Mens T20 World Cup West Indies vs Zimbabwe West Indies won by 107 runs
Cricket

ಸಿಕ್ಸರ್‌, ಬೌಂಡರಿಯಿಂದಲೇ ವಿಂಡೀಸ್‌ಗೆ 178 ರನ್‌ – ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ

Public TV
By Public TV
3 hours ago
Double Decker Bus Overturns In Lucknow
Crime

ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ – ಐವರು ದುರ್ಮರಣ, 16 ಮಂದಿಗೆ ಗಾಯ

Public TV
By Public TV
4 hours ago
ಸಾಂದರ್ಭಿಕ ಚಿತ್ರ
Bengaluru City

ಜಕ್ಕೂರಿನಲ್ಲಿ ಸಿಎಂ, ಡಿಸಿಎಂ ಜೊತೆ ಸುರ್ಜೇವಾಲಾ ಕ್ಲೋಸ್‌ ಡೋರ್‌ ಮೀಟಿಂಗ್‌

Public TV
By Public TV
4 hours ago
Baldota Factory
Districts

ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್ – ಮಂಗಳವಾರ ಖಾಸಗಿ ಶಾಲೆಗಳಿಗೆ ರಜೆ

Public TV
By Public TV
4 hours ago
Rahul Gandhi Gym Trainer Mohammad Deepak
Latest

ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?