ಬೀದರ್: ಕುಡಿದ ಮತ್ತಿನಲ್ಲಿ ಪ್ರಯಾಣಿಕನೊಬ್ಬ ಗಟ್ಟಿಯಾಗಿ ಬಸ್‌ನ ಸ್ಟೇರಿಂಗ್ ಹಿಡಿದ ಪರಿಣಾಮ, ಬಸ್ ಮರಕ್ಕೆ ಡಿಕ್ಕಿಯಾಗಿ (Bus Accident) 11 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶಹಾಪೂರ (Shahapura) ಗೇಟ್ ಬಳಿ ನಡೆದಿದೆ.
ಮಹಾರಾಷ್ಟ್ರದ (Maharastra) ಸಾರಿಗೆ ಬಸ್ ಹೈದರಾಬಾದ್‌ನಿಂದ ಉದ್ಗೀರ್‌ಗೆ ತೆರಳುತ್ತಿತ್ತು. ಬಸ್ ಶಹಾಪುರ ಗೇಟ್ ಬಳಿ ಬರುತ್ತಿದ್ದಂತೆ ಕಂಠ ಪೂರ್ತಿ ಕುಡಿದು ಬಂದಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಸ್ಟೇರಿಂಗ್‌ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಇದನ್ನೂ ಓದಿ: ನಾಡಿದ್ದು ಹಸೆಮಣೆ ಏರಬೇಕಿದ್ದವಳು ಆತ್ಮಹತ್ಯೆ – ಡೆತ್‌ನೋಟ್ ಬರೆದಿಟ್ಟು ಪ್ರಾಣಬಿಟ್ಟ ತಂದೆ-ತಾಯಿ, ಮಗಳು
ಅಪಘಾತದಲ್ಲಿ ಬಸ್ ಚಾಲಕ ವಿಕಾಸ್, ಉದ್ಗೀರ್ ಮೂಲದ ಬಾಲಾಜಿ, ಪವನ್, ನೂರ್ ಅಹ್ಮದ್, ನರಸಿಂಗ್, ಪೂಜಾ, ಸುರೇಖಾ, ಸೃಷ್ಠಿ ಸೇರಿ 11 ಜನರಿಗೆ ಗಂಭೀರ ಗಾಯಗಳಾಗಿವೆ. ಕುಟುಂಬ ಸಮೇತ ತಿರುಪತಿಗೆ ಹೋಗಿ ವಾಪಸ್ ತೆರಳುತ್ತಿದ್ದ ಒಂದೇ ಕುಟುಂಬದ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ – ಸಾಕುನಾಯಿ ದಾರುಣ ಸಾವು
