ಅಯೋಗ್ಯ 2 (Ayogya 2) ಚಿತ್ರದ ಹಾಡು ಬಿಡುಗಡೆ ವೇಳೆ ನೀನಾಸಂ ಸತೀಶ್ (Sathish Ninasam) ಆಡಿದ ಮಾತಿಗೆ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಮಾತಿನ ಭರದಲ್ಲಿ, ಸಿನಿಮಾ ಸೋಲುತ್ತೆ ಎನ್ನುವುದು ಗೊತ್ತಿದ್ದಾಗ ನಿರ್ಮಾಣ ಮಾಡಬೇಡಿ. ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ, ಶಿಕ್ಷಣ ತಗೆದುಕೊಂಡು ಬಂದು ಸಿನಿಮಾ ಮಾಡಿ ಎಂದು ಹೇಳಿದ್ದರು. ನಿರ್ಮಾಪಕ ಅಂದರೆ, ಕೇವಲ ಹಣ ಹಾಕೋದು ಮಾತ್ರವಲ್ಲ, ಎಲ್ಲವನ್ನು ತಿಳಿದುಕೊಂಡು ಬಂದರೆ, ಲಾಸ್ ಆಗಲ್ಲ ಅನ್ನುವ ಅರ್ಥದಲ್ಲಿ ಸತೀಶ್ ಮಾತಾಡಿದ್ದರು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು.ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಭೀಕರ ಹಲ್ಲೆ
ನಿರ್ಮಾಪಕರ ಸಂಘ ಸಭೆ ಕರೆಯುತ್ತಿದ್ದಂತೆಯೇ ಸಮಜಾಯಿಷಿ ಹೇಳಿಕೆ ನೀಡಿದ್ದ ಸತೀಶ್, ನಂತರ ʻಪಬ್ಲಿಕ್ ಟಿವಿʼ ಜೊತೆಯೂ ಮಾತಾಡಿದ್ದರು. ನಾನು ಹೇಳಿದ್ದೊಂದು. ನೀವು ಅರ್ಥ ಮಾಡಿಕೊಂಡಿದ್ದೊಂದು ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದರು. ನಾನು ಶಿಕ್ಷಣದ ಬಗ್ಗೆ ಮಾತಾಡಲಿಲ್ಲ. ಸಿನಿಮಾದ ತಿಳುವಳಿಕೆ ಬಗ್ಗೆ ಮಾತಾಡಿದ್ದೇನೆ ಅಂದಿದ್ದರು.
ನಿರ್ಮಾಪಕರ ಸಂಘದಲ್ಲಿ ನಡೆದ ಸಭೆಯಲ್ಲಿ ಸತೀಶ್ ಭಾಗಿಯಾಗಿ, ತಮ್ಮ ಮಾತುಗಳಿಂದ ನಿರ್ಮಾಪಕರಿಗೆ ನೋವಾಗಿದ್ದರೆ ಕ್ಷಮೆ ಕೇಳೋದಾಗಿಯೂ ತಿಳಿಸಿದ್ದರು. ಸ್ವತಃ ಸತೀಶ್ ಕೂಡ ಸಭೆಯಲ್ಲಿ ಭಾಗಿ ಆಗಿದ್ದರಿಂದ ನಿರ್ಮಾಪಕರ ಮತ್ತು ಸತೀಶ್ ನಡುವಿನ ಅಸಮಾಧಾನ ಸರಿಯಾದಂತಿದೆ.ಇದನ್ನೂ ಓದಿ: ಕನ್ನಡದ ಮೊದಲ ಬೈಕರ್ ಚಿತ್ರದ ಟ್ರೈಲರ್ ರಿಲೀಸ್
