ಬೆಂಗಳೂರು: ಯಡಿಯೂರಪ್ಪ (Yediyurappa) ಅವರು ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಷ್ಟು ದಿನ ದೆಹಲಿಯಲ್ಲೇ ಉಳಿದುಕೊಂಡಿರಲಿಲ್ಲ? ಖಾತೆ ಹಂಚಿಕೆ ಶೀಘ್ರದಲ್ಲೇ ಆಗಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumr) ಹೇಳಿದ್ದಾರೆ.
ಖಾತೆ ಹಂಚಿಕೆ ವಿಳಂಬದಿಂದಾಗಿ ಸದನದಲ್ಲಿ ಹೊಸ ಸಚಿವರ ತಯಾರಿಗೆ ಅಡ್ಡಿಯಾಗಲಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರರು, ಖಾತೆ ಹಂಚಿಕೆಗೆ ಇನ್ನೂ ಸಮಯವಿದೆ. ಜುಲೈ 15ರವರೆಗೆ ಕಾಲಾವಕಾಶವಿದೆ. 13ರಂದು ಸಂತಾಪ ಸೂಚನೆ ಹಾಗೂ 14ರಂದು ನೂತನ ಸಚಿವರ ಪರಿಚಯ ಕಾರ್ಯಕ್ರಮ ಇರಲಿದೆ ಎಂದರು.
ನಾಗೇಂದ್ರ (Nagendra) ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡುವ ಕುರಿತು ಪ್ರತಿಕ್ರಿಯಿಸಿ, ಅವರು ಹೋರಾಟ ಮಾಡಿಕೊಳ್ಳಲಿ” ಎಂದರು. ಹಾಗೆಯೇ, ತಮ್ಮ ಮಧ್ಯೆ ಬೇಸರವಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಿಎಂ, ನನಗೇನೂ ಬೇಸರವಾಗಿಲ್ಲ, ನಿಮಗೇನಾದರೂ ಬೇಸರವಾಗಿದೆಯೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನಗೆ ಸಚಿವ ಸ್ಥಾನ ನೀಡಲೇಬೇಕು, ಅದನ್ನು ಬಿಟ್ಟು ಬೇರೆ ಮಾತುಕತೆ ಇಲ್ಲ: ಕೃಷ್ಣಪ್ಪ ಖಡಕ್ ಮಾತು
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಎಂ. ಕೃಷ್ಣಪ್ಪ ವಿಚಾರವಾಗಿ ಮಾತನಾಡಿದ ಸಿಎಂ, ಅವರು ಸಚಿವ ಸ್ಥಾನ ಕೇಳುತ್ತಿದ್ದಾರೆ, ಕೇಳುವುದರಲ್ಲಿ ತಪ್ಪೇನೂ ಇಲ್ಲ. ಯಾರೂ ಬೇಜಾರಾಗಿಲ್ಲ, ಹಿರಿಯರಿದ್ದಾರೆ. ಅವರಿಗೆ ಬೇರೆ ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ. ಮಹಿಳಾ ಸಚಿವರ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಮಾಧ್ಯಮಗಳಿಗೆ ತಿಳಿಸಿಯೇ ಮಾಡುತ್ತೇವೆ. ಸಂಪುಟದಲ್ಲಿ ಕೆಲ ಸಣ್ಣ ಬದಲಾವಣೆಗಳಾಗಲಿವೆ ಎಂದರು. ಇದನ್ನೂ ಓದಿ: ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರನಡೆದ ಬಸವರಾಜ ಹೊರಟ್ಟಿ; ಅವಿಶ್ವಾಸ ನಿರ್ಣಯದ ಸವಾಲು
ಪ್ರಮಾಣ ವಚನ ಸ್ವೀಕಾರ:
ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಅವರು ಇಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಪ್ರಮುಖ ನಾಯಕರು ಆಗಮಿಸಿದ್ದರು. ಇದೇ ವೇಳೆ, ಸಭಾಪತಿ ಹೊರಟ್ಟಿಯವರು ನೂತನ ಸದಸ್ಯರಿಗೆ ವಿಧಾನ ಪರಿಷತ್ತಿನ ನಿಯಮಾವಳಿಗಳ ಪುಸ್ತಕ ಹೊಂದಿರುವ ಸೂಟ್‌ಕೇಸ್ ಹಸ್ತಾಂತರಿಸಿದರು.



