ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ (Fathers Day Movie) ಚಿತ್ರ ಫಾದರ್ಸ್ ಡೇ. ತಂದೆ – ಮಗನ ಬಾಂಧವ್ಯ ಸಾರುವ ಈ ಚಿತ್ರದ ಟ್ರೈಲರ್ ಫಾದರ್ಸ್ ಡೇ ದಿನದಂದೆ ಬಿಡುಗಡೆಯಾಗಿದೆ. ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ಕನ್ನಡದ ಮೊದಲ ಬೈಕರ್ ಚಿತ್ರವೂ ಆಗಿದೆ. ಫಾದರ್ಸ್ ಡೇ ದಿನದಂದು ಚಿತ್ರತಂಡ ಆಸಕ್ತರಿಗಾಗಿ ಬೆಂಗಳೂರಿನಲ್ಲಿ Triumph Motorcycle ಸಹಯೋಗದೊಂದಿಗೆ ಬೈಕ್ ರೈಡ್ ಸಹ ಆಯೋಜಿಸಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಆಚಾರ್ & ಕೋ”, “ಸಪ್ತಸಾಗರದಾಚೆ ಎಲ್ಲೋ”, “ಅನಾಮಾಧೇಯ ಅಶೋಕ್ ಕುಮಾರ್” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆದುಕೊಂಡಿರುವ ಹರ್ಷಿಲ್ ಕೌಶಿಕ್ ಹಾಗೂ “ಶ್ರೀರಸ್ತು ಶುಭಮಸ್ತು” ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅಜಿತ್ ಹಂದೆ (Ajith Hande) ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹೆಸರಾಂತ ಗಾಯಕ ALL OK , ಸಾಮ್ರಾಗ್ನಿ ರಾಜನ್, ಕ್ಷೇಮ ಶೆಟ್ಟಿ, ಬಾಸ್ಕಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಗಿಲ್ಲಿ ಚಿತ್ರಕ್ಕೆ ಮುಹೂರ್ತ: ಪಳಾರ್ ಸಿನಿಮಾ ಅಸಲಿ ಸ್ಟೋರಿ
ಈ ಚಿತ್ರದ ಕಥೆ ಇಬ್ಬರು ಬೈಕರ್ ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರ ನಡುವಿನ ಕಥೆಯೂ ಎಲ್ಲರ ಗಮನ ಸೆಳೆಯುತ್ತದೆ. ಕೊನೆಗೆ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ “ಫಾದರ್ಸ್ ಡೇ” ಚಿತ್ರದಲ್ಲಿದೆ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ನಿರ್ದೇಶಕ ರಾಜಾರಾಮ್ ರಾಜೇಂದ್ರನ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಟ್ರೇಲರ್ ಸಹ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ಜ್ಯೋಲ್ಸ್ನಾ ಪ್ಯಾನಿಕರ್ ಸಂಕಲನ ಹಾಗೂ ಜೋ ಪ್ಯಾನಿಕರ್ ಸಂಗೀತ ನಿರ್ದೇಶನ ಫಾದರ್ಸ್ ಡೇ ಚಿತ್ರದ ಕ್ರಿಯೇಟಿವ್ ನಿರ್ಮಾಪಕರಾಗಿ ನಿಧಿ ಜೋಶಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಅವಿನಾಶ್ ಡ್ಯಾನಿಯಲ್ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬ್ಲೂಸ್ ಶೈಲಿಯಿಂದ ಪ್ರೇರಿತವಾದ ಸಂಗೀತವಿದೆ. ಈ ಶೈಲಿಯ ಸಂಗೀತ ಸಂಯೋಜನೆ ಕನ್ನಡದಲ್ಲಿ ಇದೇ ಮೊದಲ ಬಾರಿ ಎಂದು ತಿಳಿಸಿರುವ ನಿರ್ಮಾಪಕ ಹಾಗೂ ನಿರ್ದೇಶಕ ರಾಜಾರಾಮ್ ರಾಜೇಂದ್ರನ್, ಪಿ.ವಿ.ಆರ್ – ಐನಾಕ್ಸ್ ಪಿಕ್ಚರ್ಸ್ ಮೂಲಕ ಫಾದರ್ಸ್ ಡೇ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ರಿಲೀಸ್ ಡೇಟ್ ಫೈನಲ್: ವದಂತಿಗಳಿಗೆ ಬ್ರೇಕ್, ಆಗಸ್ಟ್ 26ಕ್ಕೆ ವರ್ಲ್ಡ್ ವೈಡ್ ಎಂಟ್ರಿ!
