ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯವಾದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಬಹಿರಂಗಗೊಂಡಿದೆ.
ಚಿತ್ರದ ಮೊದಲ ಭಾಗವು ದೀಪಾವಳಿಗೆ ಅಂದರೆ ಇದೇ ನವೆಂಬರ್ 6ರಂದು ಅದ್ದೂರಿಯಾಗಿ ತೆರೆಗೆಪ್ಪಳಿಸಲಿದೆ. ನಮಿತ್ ಮಲ್ಹೋತ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಎಕ್ಸ್ (X) ಖಾತೆ ಮೂಲಕ ಈ ದಿನಾಂಕವನ್ನು ಘೋಷಿಸಿದೆ. ಇದನ್ನೂ ಓದಿ: Ramayana Trailer | ಸೂರ್ಯೋದಯಕ್ಕೂ ಮುನ್ನ ʻರಾಮಾಯಣʼ ಟ್ರೈಲರ್ ರಿಲೀಸ್ – ರಾವಣನಾಗಿ ಅಬ್ಬರಿಸಿದ ಯಶ್
An epic journey unlike anything seen before.
Watch the official trailer for #Ramayana, coming to theatres worldwide November 6. pic.twitter.com/BSiwVJMSs9
— Sony Pictures (@SonyPictures) August 5, 2026
ಆಂಗ್ಲ ಭಾಷೆಯ ಟ್ರೇಲರ್ ಬಿಡುಗಡೆ:
ಚಿತ್ರ ತಂಡ ಈ ಮೊದಲು ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಿತ್ತು. ಇದೀಗ ಆಂಗ್ಲ ಭಾಷೆಯ ಟ್ರೇಲರ್ ರಿಲೀಸ್ ಮಾಡಿದ್ದು, ಕೊನೆಯಲ್ಲಿ ಸಿನಿಮಾ ರಿಲೀಸ್ ದಿನಾಂಕವನ್ನು ಹಂಚಿಕೊಂಡಿದೆ. ವಿಶೇಷವೆಂದರೆ ಇದು ಸಾಮಾನ್ಯ ಡಬ್ ಮಾಡಿದ ಟ್ರೇಲರ್ ಅಲ್ಲ. ಬದಲಿಗೆ ಪಾತ್ರಗಳು ನೇರವಾಗಿ ಇಂಗ್ಲಿಷ್ ಸಂಭಾಷಣೆಗಳನ್ನು ಮಾತನಾಡುವಂತೆ ಇದನ್ನು ಸಿದ್ಧಪಡಿಸಲಾಗಿದೆ. AI ತಂತ್ರಜ್ಞಾನ ಬಳಸಿ ಇದನ್ನು ರಚಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದರೂ, ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವಿವಿಧ ಭಾಷೆಗಳ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾವನ್ನು ತಲುಪಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸುವುದಾಗಿ ನಮಿತ್ ಮಲ್ಹೋತ್ರಾ ಹಿಂದೆ ತಿಳಿಸಿದ್ದರು.ಇದನ್ನೂ ಓದಿ: ರಾಮಾಯಣ ಟ್ರೇಲರ್ : ಸಂಭ್ರಮಿಸಿದ ಸಿನಿಮಾ ತಂಡ

ಜುಲೈನಲ್ಲಿ ಬಿಡುಗಡೆಯಾಗಿದ್ದ ಟ್ರೇಲರ್‌ನಲ್ಲಿ ರಾವಣನು ಮೂರು ಲೋಕಗಳ ಅಧಿಪತಿ ಎಂದು ಘೋಷಿಸಿಕೊಂಡು ವಿನಾಶ ಸೃಷ್ಟಿಸುವುದರೊಂದಿಗೆ ಕಥೆ ಆರಂಭವಾಗುತ್ತದೆ. ನಂತರ ಧರ್ಮವನ್ನು ಸ್ಥಾಪಿಸಲು ವಿಷ್ಣು ರಾಮನಾಗಿ ಅವತರಿಸುವುದನ್ನು ತೋರಿಸಲಾಗಿದೆ. ರಾಮ-ಸೀತೆ ವಿವಾಹ, ರಾಮನಿಗೆ 14 ವರ್ಷಗಳ ವನವಾಸ, ಸೀತೆ ಮತ್ತು ಲಕ್ಷ್ಮಣರ ಜೊತೆಗೆ ಅರಣ್ಯಕ್ಕೆ ತೆರಳುವಿಕೆ, ರಾವಣನಿಂದ ಸೀತಾಪಹರಣ ಹಾಗೂ ಅಂತಿಮವಾಗಿ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಮಹಾಯುದ್ಧವನ್ನು ಈ ಸಿನಿಮಾದಲ್ಲಿ ಅಳೆದು ತೂಗಲಾಗಿದೆ. ಇದನ್ನೂ ಓದಿ: ರಾಮಾಯಣದಲ್ಲಿ ಪರಶುರಾಮನಾಗಿಯೂ ಕಾಣಿಸಿಕೊಂಡಿದ್ದಾರಾ ರಣಬೀರ್ ಕಪೂರ್?
ಎರಡು ಭಾಗಗಳಲ್ಲಿ ಬಿಡುಗಡೆ:
ಭಾರತೀಯರ ಅತಿ ಪವಿತ್ರ ಮಹಾಕಾವ್ಯವನ್ನು ಕೇವಲ ಎರಡು ಭಾಗಗಳಲ್ಲಿ ಅಡಕಗೊಳಿಸುವುದು ದೊಡ್ಡ ಸವಾಲಾಗಿತ್ತು ಎಂದು ನಟ ರಣ್‌ಬೀರ್ ಕಪೂರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 4,000 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ರಾಮಾಯಣದ ಮೌಲ್ಯಗಳು, ಧರ್ಮ, ಧೈರ್ಯ ಹಾಗೂ ಜೀವಮಾನದ ಪಾಠಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಸಾಯಿ ಪಲ್ಲವಿ ಮಾಡ್ರನ್ ಸೀತೆ ಅಂತ ಟ್ರೋಲ್ – ರಾಮಾಯಣ ಕಾಸ್ಟ್ಯೂಮ್ ಡಿಸೈನರ್ಸ್ ಹೇಳಿದ್ದೇನು?
ರಾಮಾಯಣ ಮೊದಲ ಭಾಗವು ನವೆಂಬರ್ 6, 2026ರಂದು ಬಿಡುಗಡೆಯಾಗಲಿದ್ದು, ಇದರ ಎರಡನೇ ಭಾಗವು 2027ರ ದೀಪಾವಳಿ ಆಸುಪಾಸಿನಲ್ಲಿ ತೆರೆಗೆಪ್ಪಳಿಸುವ ನಿರೀಕ್ಷೆಯಿದೆ. ಆದರೆ ಭಾಗ 2ರ ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಬೇಕಿದೆ.ಇದನ್ನೂ ಓದಿ: ದಾಖಲೆ ಬರೆದ ʻರಾಮಾಯಣʼ ಟ್ರೈಲರ್ – ರಾಕಿಂಗ್ ಸ್ಟಾರ್ ಹವಾ ಜೋರು



