ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ಬಣದ 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಮುಂಬೈನಲ್ಲಿ (Mumbai) ಇಂದು ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.
ಓಂರಾಜೆ ನಿಂಬಾಳ್ಕರ್ (ಧಾರಶಿವ್), ಸಂಜಯ್ ದಿನಾ ಪಾಟೀಲ್ (ಮುಂಬೈ ಈಶಾನ್ಯ), ಸಂಜಯ್ ಜಾಧವ್ (ಪರ್ಭಾನಿ), ಸಂಜಯ್ ದೇಶಮುಖ್ (ಯವತ್ಮಾಲ್-ವಾಶಿಂ), ನಾಗೇಶ್ ಪಾಟೀಲ್ ಅಷ್ಟಿಕರ್ (ಹಿಂಗೋಲಿ), ಭೌಸಾಹೇಬ್ ವಕ್ಚೌರೆ (ಶಿರಡಿ) ಬಂಡಾಯ ಎದ್ದು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ವಿರುದ್ಧ 6 ಸಂಸದರ ಬಂಡಾಯ; ಪಕ್ಷ ತೊರೆಯುವುದಾಗಿ ಇಂದು ಬಹಿರಂಗ ಘೋಷಣೆ?
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಮಾತೃ ಪಕ್ಷ ತೊರೆದು, ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿಯೊಂದಿಗೆ ವಿಲೀನಗೊಂಡ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಆರು ಹುಲಿಗಳು ಇಲ್ಲಿವೆ. ಅವರೆಲ್ಲರೂ ಈಗ ನಿಜವಾದ ಶಿವಸೇನಾ ಕುಟುಂಬವನ್ನು ಸೇರಿಕೊಂಡಿದ್ದಾರೆ. ನಾನು ಅವರನ್ನು ಶಿವಸೇನಾ ಕುಟುಂಬಕ್ಕೆ ಸ್ವಾಗತಿಸುತ್ತೇನೆ ಎಂದು ಶಿವಸೇನೆಯಲ್ಲಿ ವಿಭಜನೆಗೆ ಕಾರಣವಾದ 2022 ರ ದಂಗೆಯನ್ನು ಮುನ್ನಡೆಸಿದ್ದ ಶಿಂಧೆ ತಿಳಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ಅನರ್ಹತೆಯನ್ನು ತಪ್ಪಿಸಲು ಬಂಡಾಯ ಬಣವು ಒಟ್ಟು ಸದಸ್ಯರ ಮೂರನೇ ಎರಡರಷ್ಟು ಅಂದರೆ ಕನಿಷ್ಠ ಆರು ಸಂಸದರ ಬೆಂಬಲವನ್ನು ಹೊಂದಿರಬೇಕಾಗಿತ್ತು. ದೆಹಲಿಯಲ್ಲಿ ಉದ್ಧವ್ ಠಾಕ್ರೆ ಕರೆದಿದ್ದ ತುರ್ತು ಸಂಸದೀಯ ಪಕ್ಷದ ಸಭೆಯಲ್ಲಿ ಒಂಬತ್ತು ಸಂಸದರಲ್ಲಿ ಕೇವಲ ಮೂವರು ಸಂಸದರು ಹಾಜರಾದ ನಂತರ ವಿವಾದ ತೀವ್ರಗೊಂಡಿತು. ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್‌ಗೆ 52ನೇ ಹುಟ್ಟುಹಬ್ಬದ ಸಂಭ್ರಮ – ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ
