ತಮ್ಮ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ಕೊಡುವುದಾಗಿ ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದರು. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಹೇಳುವುದಾಗಿ ಮಾತನಾಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಚಂದ್ರು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಇಂದಿನಿಂದ ‘ಕಬ್ಜ 2’ (Kabzaa 2 ) ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.
ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರುತ್ತದೆಯಂತೆ. ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದ್ದು, ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದಾರಂತೆ. ಸದ್ಯ ಕಥೆ ಬರೆಯುವುದರಲ್ಲಿ ತೊಡಗಿರುವ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ:ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ
‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದಿದ್ದಾರೆ ಚಂದ್ರು. ಸಿನಿಮಾ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಹೇಳಿದರು.
ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar) ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.