ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಇಂದು ಬಿಡುಗಡೆ ಆಗಿದೆ. ರಿಲೀಸ್ ಗೂ ಮುನ್ನಾ ದಿನ ನಟ ವಿಜಯ್ ದೇವರಕೊಂಡ ಸಿನಿಮಾಗೆ ಶುಭಾಶಯ ಕೋರಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಆ ಟ್ವೀಟ್ ನಲ್ಲಿ ಸಮಂತಾರನ್ನು ಹಾಡಿಹೊಗಳಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಆಡಿದ ಮಾತುಗಳು ಸಮಂತಾ ಅಭಿಮಾನಿಗಳಲ್ಲಿ ಧನ್ಯತಾ ಭಾವ ಮೂಡಿಸಿವೆ.
Advertisement
ಸಮಂತಾ ಅವರ ಸಿನಿಮಾ ಬಗೆಗಿನ ಪ್ರೀತಿಯನ್ನು ಮನಮುಟ್ಟುವಂತೆ ಬರೆದಿರುವ ದೇವರಕೊಂಡ, ‘ನಿನೊಬ್ಬ ನಿಜವಾದ ಹೋರಾಟಗಾರ್ತಿ’ ಎಂದು ಕರೆದಿರುವುದು ಸಮಂತಾ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ‘ಪ್ರತಿ ಶಾಟ್ ಇದ್ದಾಗಲೂ ಇದೇ ನನ್ನ ಕೊನೆಯ ಸಿನಿಮಾ ಎನ್ನುವಂತೆ ನಟಿಸುತ್ತೀರಿ’ ಎಂದು ಆಡಿದ ಮಾತು ಸಮಂತಾರ ವೃತ್ತಿಬದ್ಧತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಹೆಗ್ಡೆ ಸ್ಪಷ್ಟನೆ
Advertisement
Advertisement
‘ನೀವು ಯಾವಾಗಲೂ ಪ್ರೀತಿಯಿಂದ ತುಂಬಿರುತ್ತೀರಿ. ನೀವು ಅಂದುಕೊಂಡಿದ್ದನ್ನೇ ಮಾಡುತ್ತೀರಿ. ಸದಾ ಬೇರೆಯವರನ್ನು ಹುರಿದುಂಬಿಸುತ್ತೀರಿ. ಸದಾ ಉತ್ತಮವಾದದನ್ನೇ ಕೊಡುವ ನಿಮ್ಮ ಗುಣಕ್ಕೆ ಎಲ್ಲರೂ ಮನಸೋಲುತ್ತಾರೆ. ನಿಮ್ಮ ಶಾಕುಂತಲಂ ಸಿನಿಮಾ ಗೆಲ್ಲಲಿ’ ಎಂದು ಹಾರೈಸಿದ್ದಾರೆ ವಿಜಯ್ ದೇವರಕೊಂಡ.
Advertisement
ಅಷ್ಟೊಂದು ಪ್ರೀತಿ ತುಂಬಿದ ಮಾತುಗಳಿಗೆ ಫಿದಾ ಆಗಿರುವ ಸಮಂತಾ, ಭಾವನಾತ್ಮಕವಾಗಿಯೇ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಮಾತುಗಳಿಗೆ ಪ್ರತಿಕ್ರಿಯಿಸೋಕೆ ಪದಗಳೇ ಇಲ್ಲ. ಈ ವೇಳೆಯಲ್ಲಿ ಇದು ಅಗತ್ಯವಿತ್ತು. ಧನ್ಯವಾದಗಳು ಮೈ ಹೀರೋ’ ಎಂದು ಅವರು ರೀ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಸಮಂತಾಗೆ ಶುಭಾಶಯದ ಮಳೆಯನ್ನೇ ಸುರಿಸಿದ್ದಾರೆ.