ನವದೆಹಲಿ: ಮತ್ತೆ ವಾಣಿಜ್ಯ (Commercial LPG Cylinder) ಹಾಗೂ ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆಗೆ (Price Hike) ತೈಲ ಕಂಪನಿಗಳು ನಿರ್ಧರಿಸಿವೆ. ಜುಲೈ 1 ರಿಂದ ಕಮರ್ಶಿಯಲ್ ಹಾಗೂ ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಕಮರ್ಶಿಯಲ್ ಸಿಲಿಂಡರ್ (19 ಕೆಜಿ, 14.2 ಕೆಜಿ) 30 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ. ಇಂಡಸ್ಟ್ರಿಯಲ್ ಸಿಲಿಂಡರ್ (40ಕೆಜಿ) 1300 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ದರ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಶಾಕ್ ಕೊಟ್ಟಿದೆ.
ಜೂ.1 ರಂದು ಸಹ ಸಿಲಿಂಡರ್ ದರ ಏರಿಕೆಯಾಗಿತ್ತು. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ದರ 42 ರೂ. ಹೆಚ್ಚಾಗಿತ್ತು, ಪ್ರತಿ ಸಿಲಿಂಡರ್ ಬೆಲೆ 3,113.5 ರೂ.ಗಳಿಗೆ ತಲುಪಿದ್ದರೆ, ಬೆಂಗಳೂರಿನಲ್ಲಿ (Bengaluru) 46 ರೂ.ಗಳಷ್ಟು ಹೆಚ್ಚಳವಾಗಿ ಪ್ರತಿ ಸಿಲಿಂಡರ್ ದರ 3,198 ರೂ.ಗಳಿಗೆ ಏರಿಕೆಯಾಗಿತ್ತು.
ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ದರ 53.5 ರೂ. ಹೆಚ್ಚಾಗಿ, 3,255.5 ರೂ. ತಲುಪಿತ್ತು. ಇದರೊಂದಿಗೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್‌ಗಳ ಮೇಲಿನ ಬೆಲೆ 11 ರೂ. ಹೆಚ್ಚಿಸಲಾಗಿತ್ತು. ಇದರಿಂದ ಪ್ರತಿ ಸಿಲಿಂಡರ್ ಬೆಲೆ 821.5 ರೂ.ಗಳಿಗೆ ತಲುಪಿತ್ತು.

