Monday, 24th February 2020

Recent News

ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ ಮಹಾ ಶಿವರಾತ್ರಿಗೆ ಚಿತ್ರಮಂದಿರಕ್ಕೆ!

ನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ತಮ್ಮ ಅದ್ಭುತ ನಟನೆ, ನಿರ್ದೇಶನದಿಂದ ಮನೋರಂಜನೆ ನೀಡುತ್ತಾ ಬಂದಿರುವ ರಮೇಶ್ ಅರವಿಂದ್ ಈಗಾಗಲೇ ನೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅವ್ರ 101 ನೇ ಚಿತ್ರ `ಶಿವಾಜಿ ಸುರತ್ಕಲ್’ ಚಿತ್ರ ಬಿಡುಗಡೆಯಾಗಲು ಸಿದ್ದವಾಗಿದ್ದು, ವಿಭಿನ್ನ ಪಾತ್ರದಲ್ಲಿ ರಂಜಿಸಲು ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಅಂಗಳಕ್ಕೆ ಬರಲಿದ್ದಾರೆ.

ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿರೋ ಈ ಚಿತ್ರವನ್ನು ರೇಖಾ.ಕೆ.ಎನ್, ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ. `ಶಿವಾಜಿ ಸುರತ್ಕಲ್’ ರಮೇಶ್ ಅರವಿಂದ್ 101ನೇ ಚಿತ್ರ ಅನ್ನೋದು ಒಂದು ವಿಶೇಷ ಆದ್ರೆ ಈ ಚಿತ್ರದಲ್ಲಿ ಪತ್ತೇದಾರಿ ನಾಯಕನಾಗಿ ಎರಡು ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.

ಪತ್ತೇದಾರಿ ಕಥಾಹಂದರ `ಶಿವಾಜಿ ಸುರತ್ಕಲ್’ ಚಿತ್ರದಲ್ಲಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಸೀನ್‍ಗಳು, ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡಲಿವೆ. ಸೆನ್ಸಾರ್ ಅಂಗಳದಲ್ಲಿ ಪಾಸ್ ಆಗಿರುವ ಈ ಚಿತ್ರದ ಸ್ಯಾಂಪಲ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದು, ಸಿನಿಮಾ ತೆರೆಗ ಬರೋದನ್ನೇ ಕಾಯುತ್ತಿದ್ದಾರೆ ಸಿನಿರಸಿಕರು. ಮಹಾ ಶಿವರಾತ್ರಿಗೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದವಾಗಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಆರೋಹಿ ನಾಯಕಿಯರಾಗಿ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

Leave a Reply

Your email address will not be published. Required fields are marked *