ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಪ್ರವೇಶ ಪಡೆದಿದೆ. ಪುನೀತ್ ರಾಜ್ ಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜಕುಮಾರ್ ನಟನೆಯ ಯುವ ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿಕೊಂಡು ರಿಲೀಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ 17ರ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಮುನ್ನ ದಿನ ಮಾರ್ಚ್ 16ರಂದು ಹೊಸಪೇಟೆಯಲ್ಲಿ ಮೆಗಾ ಇವೆಂಟ್ ಆಯೋಜನೆ ಮಾಡಲಾಗಿದೆ. ಅಲ್ಲಿಂದ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದೆ.
Advertisement
ಜೀವನದ ಮಹಾ ಜಾತ್ರೆಗೆ ಯುವರಾಜ್ ಕುಮಾರ್ ಸಜ್ಜಾಗ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿಕ್ಕಪ್ಪ ಪುನೀತ್ (Puneeth Rajkumar) ಆಶೀರ್ವಾದ ಪಡೆದು ಹೊಸ ಬದುಕು ಶುರು ಮಾಡಲಿದ್ದಾರೆ. ಮಾರ್ಚ್ ‘ಯುವ’ (Yuva) ಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಿದೆ ಸಿನಿಮಾ ಲೋಕ. ಮಾರ್ಚ್ನಲ್ಲಿ ಏನೇನು ನಡೆಯಲಿದೆ? ಯಾವ ರೀತಿ ಯುವ ರೆಡಿಯಾಗ್ತಿದ್ದಾರೆ? ಚಿತ್ರತಂಡದ ಪ್ಲ್ಯಾನ್ ಏನು? ಇಲ್ಲಿದೆ ಮಾಹಿತಿ.
Advertisement
Advertisement
ಯುವರಾಜ್ ಕುಮಾರ್ (Yuva Rajkumar) ಮೊದಲ ಸಿನಿಮಾದ ಕೆಲಸವನ್ನ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ ಹಾಗೇ ಯುವ ನಡೆದುಕೊಂಡಿದ್ದಾರೆ. ಉತ್ತರ ಈಗ ‘ಯುವ’ ಸಿನಿಮಾ ಅಚ್ಚುಕಟ್ಟಾಗಿ ಸಿದ್ಧವಾಗಿದೆ. ಅಂದುಕೊಂಡಂತೆ ಆಗಿದ್ರೆ ಯುವ ಇಷ್ಟೊತ್ತಿಗಾಗಲೇ ನಿಮ್ಮ ಮಡಿಲಿಗೆ ಬಂದಿರಬೇಕಿತ್ತು. ‘ಸಲಾರ್’ (Salaar) ರಿಲೀಸ್ನಲ್ಲಿ ಆದ ಬದಲಾವಣೆಯಿಂದ ‘ಯುವ’ ಬರುವಿಕೆ ಕೂಡ ಮುಂದೂಡಲಾಯ್ತು. ಈಗ ಎಲ್ಲದಕ್ಕೂ ವೇದಿಕ್ಕೆ ಸಜ್ಜಾಗಿದೆ. ‘ಯುವ’ ಬದುಕಿನ ವಸಂತ ಕಾಲ ಸನಿಹ ಆಗ್ತಿದೆ.
Advertisement
ಮಾರ್ಚ್ ತಿಂಗಳಲ್ಲಿ ಯುವ ಸಿನಿಮಾದ ಬ್ಯಾಕ್ ಟು ಬ್ಯಾಕ್ ಇವೆಂಟ್ಗಳು ನಡೆಯಲಿವೆ. ಆ ತಿಂಗಳು ಪೂರ್ತಿ ಯುವ ಜಪ ನಡೆಯಲಿದೆ. ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನ ಸ್ವಾಗತಕ್ಕೆ ಅದ್ಧೂರಿ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಚಿಕ್ಕಪ್ಪನಿಗೆ ಕೈ ಮುಗಿದು ಆಶೀರ್ವಾದ ಪಡೆದು ಮುಂದಿನ ಕೆಲಸಕ್ಕೆ ಯುವರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ. ಅಪ್ಪುಗೆ ತುಂಬು ಹೃದಯದ ಪ್ರೀತಿ ಕೊಡುವ ಹೊಸಪೇಟೆಯ ಜನರ ಮಧ್ಯೆ ಯುವ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.
ಮಾರ್ಚ್ 16ರಂದು ಸಂಜೆ ಹೊಸಪೇಟೆಯಲ್ಲಿ ಹಬ್ಬದ ಸಡಗರ ಯುವ ಜಾತ್ರೆ ಜೋರಾಗಿ ಸಾಗಲಿದೆ. ನಂತರ ಮೂರು ಕಡೆ ಇವೆಂಟ್ ಆಯೋಜನೆ ಮಾಡಲಾಗಿದೆ. ಮಾರ್ಚ್ 28ರಂದು ಗುರುವಾರ ರಾಯರ ಕೃಪೆ ಕೇಳಿ ಯುವ, ಸಪ್ತಮಿ ಗೌಡ ನಟನೆಯ ‘ಯುವ’ ಸಿನಿಮಾ ರಿಲೀಸ್ ಮಾಡಲಿದೆ ಹೊಂಬಾಳೆ ಸಂಸ್ಥೆ (Hombale Films). ಮಾರ್ಚ್ನಿಂದ ಕನ್ನಡ ಚಿತ್ರರಂಗದಲ್ಲಿ ಯುವ ಅಧ್ಯಾಯ ಶುರುವಾಗಲಿದೆ. ಅಪ್ಪುನ ಪ್ರೀತಿಸಿದ ಜನ ಯುವ ಕೈ ಹಿಡಿದು ನಡೆಸ್ತಾರೆ ಅಪ್ಪು ಅಲ್ಲಿಂದಲೇ ಮಗನಿಗೆ ಹಾರೈಸ್ತಾರೆ.