ಬೆಂಗಳೂರು: ಶಾರ್ಟ್ ಮೂವಿಯಲ್ಲಿ ಆ್ಯಕ್ಟಿಂಗ್ ಮಾಡುತ್ತೇನೆ ಅಂತ ಬಂದವನು, ಸಿನಿಮಾ ನಟನ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಶೂಟಿಂಗ್ ವೇಳೆ ಸಿನಿಮಾ ನಟನ ಮನೆಯಲ್ಲಿ ಕಳ್ಳತನವಾಗಿದೆ. ‘ಫ್ಲಾಟ್ F01’ (Flat No F01 Movie) ಹೆಸರಿನ ಶಾರ್ಟ್ ಮೂವಿಯನ್ನು ನಟ ಲಿಖಿತ್ ರಾಜ್ (Likhit Raj) ನಿರ್ದೇಶನ ಮಾಡುತ್ತಿದ್ದರು. ಗರುಡಪುರಾಣ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಸೇರಿ ಹಲವು ಶಾರ್ಟ್ ಮೂವಿಗಳಲ್ಲಿ ನಟ ಲಿಖಿತ್ ರಾಜ್ ಅಭಿನಯಿಸಿದ್ದಾರೆ. ಲಿಖಿತ್ ರಾಜ್ ಬಳಿ ಅವಕಾಶ ಕೇಳಿಕೊಂಡು ಅಭಿಷೇಕ್ ಎಂಬಾತ ಬಂದಿದ್ದ. ಇದನ್ನೂ ಓದಿ: ಪ್ರಣಾಮ್ ಚಿತ್ರದಲ್ಲಿ ಸಹೋದರ ಪ್ರಜ್ವಲ್ ಎಂಟ್ರಿ
ಫ್ಲಾಟ್ F01 ಶಾರ್ಟ್ ಮೂವಿಯಲ್ಲಿ ಅಭಿಷೇಕ್ ನಟನೆಗೆ ಅವಕಾಶ ಪಡೆದಿದ್ದ. ಕಳೆದ ಜೂನ್ 28 ರಿಂದ ಸಹಕಾರನಗರದ ನಟ ಲಿಖಿತ್ ಫ್ಲಾಟ್‌ನಲ್ಲಿ ಶೂಟಿಂಗ್ ನಡೆದಿತ್ತು. ಈ ವೇಳೆ ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳುವಾಗಿತ್ತು. ನಂತರ ಪೊಲೀಸ್ ಠಾಣೆಗೆ ನಟನ ತಾಯಿ ದೂರು ನೀಡಿದ್ದರು.
ಸದ್ಯ ದೂರಿನನ್ವಯ ಶೂಟಿಂಗ್‌ಗೆಂದು ಬಂದು ಚಿನ್ನದ ಸರ ಕದ್ದಿದ್ದ ಅಭಿಷೇಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಅಭಿಷೇಕ್‌ನಿಂದ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: `ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ – ದರ್ಶನ್ ಪತ್ನಿ ಹೇಳಿದ್ದು ಆ ನಟನಿಗಾ?
