ರಾಕಿಂಗ್ ಸ್ಟಾರ್ ಯಶ್ (Yash), ರಣಬೀರ್ ಕಪೂರ್-ಸಾಯಿ ಪಲ್ಲವಿ ನಟನೆಯ ರಾಮಾಯಣ (Ramayana) ಚಿತ್ರವು ರಿಲೀಸ್ ಆಗಿ 21 ದಿನಗಳನ್ನು ಪೂರೈಸಿದ್ದು, ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಪುಷ್ಪ 2 ರ (Pushpa 2) ಜೀವಮಾನದ ಗಳಿಕೆಯನ್ನು ಹಿಂದಿಕ್ಕಿದೆ. ಆ ಮೂಲಕ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.
ವಿಶ್ವಾದ್ಯಂತ ಒಟ್ಟು 1,755.60 ಕೋಟಿ ರೂ. ಕಲೆಕ್ಷನ್ನೊಂದಿಗೆ, ರಾಮಾಯಣ ಈಗ ಬಾಹುಬಲಿ 2 (2017) ನಂತರದ ಸ್ಥಾನದಲ್ಲಿದೆ. ಪ್ರಬಾಶ್ ಸಿನಿಮಾ ವಿಶ್ವಾದ್ಯಂತ 1,788.06 ಕೋಟಿ ರೂ. ಗಳಿಸಿದೆ. ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ದಂಗಲ್ ಹಾಗೂ ಧುರಂಧರ್ 2 ಸಿನಿಮಾಗಳಿವೆ. ದಂಗಲ್ (2016) 2070.30 ಕೋಟಿ ರೂ. ಗಳಿಸಿದೆ. ಧುರಂಧರ್ 2 ಸಿನಿಮಾ 1,813.39 ಕೋಟಿ ರೂ. ಗಳಿಸಿದೆ. ಸಕ್ನಿಲ್ಕ್ ಪ್ರಕಾರ ಪುಷ್ಪ 2 ವಿಶ್ವಾದ್ಯಂತ 1,742.10 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ: ಸಕ್ಸಸ್ ಖುಷಿಯಲ್ಲಿ ಗುರುದ್ವಾರಕ್ಕೆ ಭೇಟಿ ಕೊಟ್ಟ `ರಾಮಾಯಣ’ ಟೀಮ್
21ನೇ ದಿನದ ನಂತರ, ಭಾರತದಲ್ಲಿ ರಾಮಾಯಣದ ನೆಟ್ ಕಲೆಕ್ಷನ್ 982.55 ಕೋಟಿ ರೂ. ಮತ್ತು ಒಟ್ಟು 1,173.60 ಕೋಟಿ ರೂ. ಸಂಗ್ರಹವಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 21ನೇ ದಿನದಂದು ರಾಮಾಯಣ 15,700 ಪ್ರದರ್ಶನಗಳಲ್ಲಿ 9.60 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.
ಈ ಚಿತ್ರವು ವಿದೇಶಗಳಲ್ಲಿ ಇಲ್ಲಿಯವರೆಗೆ 582 ಕೋಟಿ ರೂ. ಗಳಿಸಿದೆ. ಇದು ವಿಶ್ವಾದ್ಯಂತ ಒಟ್ಟು ಗಳಿಕೆಯನ್ನು 1,755.60 ಕೋಟಿ ರೂ.ಗೆ ಏರಿಸಿದೆ. 21ನೇ ದಿನದಂದು, ಹಿಂದಿ ಭಾಷೆಯ ಕೊಡುಗೆ ಒಟ್ಟು 13,463 ಪ್ರದರ್ಶನಗಳಿಂದ 6.75 ಕೋಟಿ ರೂ.ಗಳಾಗಿದೆ. ನಂತರ ಕನ್ನಡದಲ್ಲಿ 75 ಲಕ್ಷ ರೂ., ತಮಿಳಿನಲ್ಲಿ 70 ಲಕ್ಷ ರೂ., ತೆಲುಗಿನಲ್ಲಿ 30 ಲಕ್ಷ ರೂ. ಮತ್ತು ಮಲಯಾಳಂನಲ್ಲಿ 1.10 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ರಾಮಾಯಾಣ ಟೀಂ – ಜಾಗತಿಕ ಯಶಸ್ಸಿಗೆ ಮೆಚ್ಚುಗೆ
