‘ಒಂದು ಶಿಕಾರಿಯ ಕಥೆ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಸಚಿನ್ ಶೆಟ್ಟಿ, ಈಗ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ‘ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕುಗಳನ್ನು ಈಗ ‘ರಿಷಬ್ ಶೆಟ್ಟಿ ಮ್ಯೂಸಿಕ್’ (Rishab Shetty Music) ಸಂಸ್ಥೆ ಒಳ್ಳೆಯ ಮೊತ್ತಕ್ಕೆ ಖರೀದಿಸಿದೆ. ಹೊಸ ಪ್ರತಿಭೆಗಳಿಗೆ ಮತ್ತು ಒಳ್ಳೆಯ ಸಿನಿಮಾಗಳಿಗೆ ಸದಾ ಸಪೋರ್ಟ್ ಮಾಡುವ ರಿಷಬ್ ಶೆಟ್ಟಿ ಅವರ ಸಂಸ್ಥೆ ಜೊತೆಯಾಗಿರುವುದು ಚಿತ್ರತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಈ ಸಿನಿಮಾದ ಹಾಡುಗಳಿಗೆ ನಿಶಾಂತ್ ಮಧುಗಿರಿ ಮತ್ತು ಮನೋಜ್ ಚಂದ್ರಕಾಂತ್ ಜಂಟಿಯಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಆಲ್ಬಮ್ನಲ್ಲಿ ಒಟ್ಟು ಐದು ಬೇರೆ ಬೇರೆ ಶೈಲಿಯ ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ವಿಶೇಷ ಅಂದ್ರೆ ಸಿದ್ದಾರ್ಥ್ ಬೆಳ್ಮಣ್ಣು, ಅನಿರುದ್ಧ್ ಶಾಸ್ತ್ರಿ, ಮೈಮ್ ರಾಮದಾಸ್, ಐರಾ ಉಡುಪಿ ಹಾಗೂ ಕರಿಬಸವ ತಡಕಲ್ ಅವರಂತಹ ಪ್ರತಿಭಾವಂತ ಗಾಯಕರು ಈ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸದ್ಯದಲ್ಲೇ ಈ ಹಾಡುಗಳು ಮ್ಯೂಸಿಕ್ ಪ್ರಿಯರ ಮುಂದೆ ಬರಲಿವೆ.
ಚಿತ್ರದಲ್ಲಿ ಯುವ ನಟ ಯಶ್ವಂತ್ ಕುಮಾರ್ ಹೀರೋ ಆಗಿ ನಟಿಸಿದ್ದು, ಅವರಿಗೆ ಜೋಡಿಯಾಗಿ ‘ಬ್ಲಿಂಕ್’ ಸಿನಿಮಾ ಖ್ಯಾತಿಯ ನಟಿ ಮಂದಾರ ಬಟ್ಟಲಹಳ್ಳಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಫ್ ಕಟ್ ಪ್ರೊಡಕ್ಷನ್ಸ್, ಎ ಸ್ಕ್ವೇರ್ ಮತ್ತು ಆರುಷ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಇರುವುದರಿಂದ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡಲಿದೆ ಎನ್ನಲಾಗುತ್ತಿದೆ.ಇದನ್ನೂ ಓದಿ: ರಸ್ತೆ ದಾಟುವ ವೇಳೆ ಕಾರು ಅಪಘಾತ – ಒಂದು ತಿಂಗಳು ಕೋಮಾದಲ್ಲಿದ್ದ 5 ವರ್ಷದ ಬಾಲಕಿ ಸಾವು
ಸದ್ಯ ‘ಸಮುದ್ರ ಮಂಥನ’ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಕೊನೆಯ ಹಂತಕ್ಕೆ ಬಂದಿವೆ. ಸಿನಿಮಾ ಈಗಾಗಲೇ ಸೆನ್ಸಾರ್ ಬೋರ್ಡ್ ಮುಂದಿದ್ದು, ಸರ್ಟಿಫಿಕೇಟ್ ಸಿಕ್ಕ ತಕ್ಷಣ ರಿಲೀಸ್ ಡೇಟ್ ಅನೌನ್ಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ಸಿನಿಮಾ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.ಇದನ್ನೂ ಓದಿ: ಸೋದರ ಸಂಬಂಧಿಯೊಂದಿಗೆ ಮಗಳ ಪ್ರೇಮ – ಎಂಗೇಜ್ಮೆಂಟ್ ಹಿಂದಿನ ದಿನ ಕೊಂದು ನೇಣು ಬಿಗಿದ ತಂದೆ
