ಬೆಂಗಳೂರು: ಕೆಆರ್ ಸರ್ಕಲ್ (KR Circle) ಬಳಿ ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ಗೆ ಮತ್ತೊಂದು ಬಿಎಂಟಿಸಿ (BMTC) ಬಸ್ ಡಿಕ್ಕಿ ಹೊಡೆದು ಬಸ್‌ನಲ್ಲಿದ್ದ ಪ್ರಯಾಣಿಕರು, ಡ್ರೈವರ್‌ಗೆ ಗಾಯಗಳಾದ ಪ್ರಕರಣ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಮಾಡಿದ ಚಾಲಕ ಅಭಿಷೇಕ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಶಾಂತಿನಗರ 3ನೇ ಬಿಎಂಟಿಸಿ ಡಿಪೋ ಚಾಲಕ ಅಭಿಷೇಕ್, ಕೆಎ 51ಎಜೆ 6163 ಬಸ್ ಚಲಾಯಿಸುವ ವೇಳೆ ಅಪಘಾತವಾಗಿದೆ. ಕೆಆರ್ ಸರ್ಕಲ್‌ನಲ್ಲಿ ರೆಡ್ ಸಿಗ್ನಲ್ ಬಿದ್ದಿದ್ದು ಎಲ್ಲಾ ವಾಹನಗಳು ನಿಂತಿರುತ್ತವೆ. ಈ ವೇಳೆ ರೆಡ್ ಸಿಗ್ನಲ್ ಇದ್ದರೂ ಬಸ್ ಚಾಲಕ ವೇಗವಾಗಿ ಬಸ್ ಚಲಾಯಿಸಿ ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಬಿಎಂಟಿಸಿ ಬಸ್‌ಗೆ ಗುದ್ದಿದ್ದಾನೆ. ಇದನ್ನೂ ಓದಿ: ಭಾರತದ ದೇವಾಲಯಗಳನ್ನು ನಿರ್ವಹಿಸೋದ್ಯಾರು? – ರಾಜ್ಯಗಳ ಪಾತ್ರ ಏನು?
ಈ ಅಪಘಾತದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದೂರುದಾರನ ಎಡಗಾಲಿನ ಮೂಳೆ ಮುರಿದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಶರಣಮ್ಮ ಎಂಬ ಪ್ರಯಾಣಿಕರ ದವಡೆ ಹಲ್ಲು ಮುರಿದಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಬಸ್ ಚಾಲಕ ಪ್ರಕಾಶ್‌ಗೂ ಗಂಭೀರ ಗಾಯ ಆಗಿದೆ. ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: SIR ಪ್ರಕ್ರಿಯೆಗೆ ತೆರಳಿದ್ದ ವಿಎ ಭುವನಾ ಅಪಘಾತದಲ್ಲಿ ದುರ್ಮರಣ; ಭಾನುವಾರ ಹುಟ್ಟೂರಲ್ಲಿ ಅಂತ್ಯಕ್ರಿಯೆ
ಬಸ್ ಚಾಲಕನ ನಿರ್ಲಕ್ಷದಿಂದ ಘಟನೆ ನಡೆದಿದ್ದು, ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆ ವೇಳೆ ಅಪಾರ ಸಾವು ಸಂಭವಿಸುವ ಸಾಧ್ಯತೆ – ಮುಂಚಿತವಾಗಿಯೇ 3,000 ಸಮಾಧಿ ಸಿದ್ಧ
