ಹೈದರಾಬಾದ್: ತಿರುಮಲದಲ್ಲಿ ದರ್ಶನಕ್ಕಾಗಿ ಸರದಿ ಸಾಲಲ್ಲಿ ಕಾಯುವ ಭಕ್ತರಿಗೆ ಪ್ರಸಾದ ವಿತರಣೆಯನ್ನು ಸುಲಭಗೊಳಿಸಲು ಟಿಟಿಡಿ (TTD) ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.
ಪ್ರಸಾದ ಕೌಂಟರ್‌ನಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಭಕ್ತರಿಗೆ ಪ್ರಸಾದವನ್ನು ತ್ವರಿತವಾಗಿ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ `ಮೂವಿಂಗ್-ಟೇಬಲ್’ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಕೇಸ್; ಆರೋಪಿ ಕಾಲಿಗೆ ಗುಂಡೇಟು
ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ಮೂವಿಂಗ್ ಟೇಬಲ್‌ನ್ನು ವಿನ್ಯಾಸಗೊಳಿಸಿ ಅಳವಡಿಸಲಾಗಿದೆ. ಇದರಲ್ಲಿ 7 ಮೀಟರ್ ಉದ್ದದ ಮೇಜು ಕನ್ವೇಯರ್ ಬೆಲ್ಟ್ನಂತೆ ನಿರಂತರವಾಗಿ ಚಲಿಸುತ್ತದೆ. ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಇದರ ಮೇಲೆ ಇರಿಸಿದ ನಂತರ, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಸುಲಭವಾಗಿ ತಾವು ನಿಂತಲ್ಲೇ ಪ್ರಸಾದ ಪಡೆಯಬಹುದು.
ಈ ಮೊದಲು ಇದರ ಪ್ರಯೋಗ ನಡೆಸಲಾಗಿದ್ದು, ಇದರ ಯಶಸ್ಸಿನ ನಂತರ ಟಿಟಿಡಿಯು ಈ ಮೂವಿಂಗ್-ಟೇಬಲ್ ವ್ಯವಸ್ಥೆಯನ್ನು ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್ ಹಾಗೂ ಮುಖ್ಯ ಸರತಿ ಸಾಲುಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಈವರೆಗೆ ದರ್ಶನ ಸಾಲಿನಲ್ಲಿ ಕಾದವರು ಕೌಂಟರ್‌ಗೆ ಹೋಗಿ ಪ್ರಸಾದ ಪಡೆಯಬೇಕಿತ್ತು. ಆದರೆ ಇನ್ನು ಮುಂದೆ ಮೂವಿಂಗ್ ಟೇಬಲ್ ಕಾರಣ ಭಕ್ತರಿಗೆ ನಿಂತಲ್ಲೇ ಪ್ರಸಾದ ಬರಲಿದೆ.ಇದನ್ನೂ ಓದಿ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ‘ಪಬ್ಲಿಕ್ ಟಿವಿ ವಿದ್ಯಾಮಂದಿರ’ – ಇಂದಿನಿಂದ 2 ದಿನಗಳ ಮೆಗಾ ಶೈಕ್ಷಣಿಕ, ಉದ್ಯೋಗ ಮೇಳ



