– 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿ – ಸ್ಥಳದಲ್ಲೇ ಉದ್ಯೋಗ ದೊರೆಯುವ ಸಾಧ್ಯತೆ
– ವಿದ್ಯಾರ್ಥಿವೇತನ, ದಾಖಲಾತಿ ಕುರಿತು ತಜ್ಞರ ಮಾರ್ಗದರ್ಶನ
ಉತ್ತಮ ಶಿಕ್ಷಣ… ಉತ್ತಮ ಉದ್ಯೋಗ… ಪ್ರತಿ ವಿದ್ಯಾರ್ಥಿ ಹಾಗೂ ಪೋಷಕರ ಕನಸು. ಈ ಎರಡೂ ಕನಸುಗಳಿಗೆ ಒಂದೇ ವೇದಿಕೆಯಲ್ಲಿ ದಾರಿ ತೋರಿಸುವ ಉದ್ದೇಶದಿಂದ ʻಪಬ್ಲಿಕ್ ಟಿವಿʼ ಆಯೋಜಿಸಿರುವ ‘ವಿದ್ಯಾಮಂದಿರ’ ಮೆಗಾ ಪಿಜಿ ಶೈಕ್ಷಣಿಕ ಹಾಗೂ ಉದ್ಯೋಗ ಮೇಳ ಇಂದಿನಿಂದ ಆರಂಭವಾಗಿದೆ.
ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯುತ್ತಿರುವ ಈ ಎರಡು ದಿನಗಳ (ಆ.9 ಮತ್ತು ಆ.10) ಮೇಳದಲ್ಲಿ ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳು, ವಿದೇಶಿ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳ ಕುರಿತು ಸಮಗ್ರ ಮಾಹಿತಿ ದೊರೆಯಲಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು ಉಚಿತ ಪ್ರವೇಶ ಇರಲಿದೆ.


ಪದವಿ ಬಳಿಕ ಮುಂದೇನು? ಇಲ್ಲಿದೆ ಉತ್ತರ
ಪದವಿ ಪೂರ್ಣಗೊಳಿಸಿದ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು? ಯಾವ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ? ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲಿದೆ? ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಯಾವ ಮಾರ್ಗ ಅನುಸರಿಸಬೇಕು? ಇಂತಹ ವಿದ್ಯಾರ್ಥಿಗಳ ಸಾಮಾನ್ಯ ಪ್ರಶ್ನೆಗಳಿಗೆ ‘ಪಬ್ಲಿಕ್ ಟಿವಿ ವಿದ್ಯಾಮಂದಿರ’ದಲ್ಲಿ ತಜ್ಞರಿಂದ ನೇರ ಉತ್ತರ ಸಿಗಲಿದೆ.
ಒಂದೇ ವೇದಿಕೆಯಲ್ಲಿ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ವಿವಿಧ ಸ್ನಾತಕೋತ್ತರ ಪದವಿ, ವೃತ್ತಿಪರ ಹಾಗೂ ಔದ್ಯೋಗಿಕ ಕೋರ್ಸ್‌ಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಇದರ ಜೊತೆಗೆ ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಕಂಪನಿಗಳೊಂದಿಗೆ ಸಂವಾದ ನಡೆಸುವ ಅವಕಾಶವೂ ಲಭ್ಯವಿದ್ದು, ಪ್ರತಿಭಾವಂತ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ದೊರೆಯುವ ಸಾಧ್ಯತೆಯಿದೆ.

ವಿದ್ಯಾರ್ಥಿವೇತನ, ದಾಖಲಾತಿ ಕುರಿತು ತಜ್ಞರ ಮಾರ್ಗದರ್ಶನ
ಮೇಳದಲ್ಲಿ ಭಾಗವಹಿಸುವವರಿಗೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸುವ ಅವಕಾಶವಿದೆ. ದಾಖಲಾತಿ ಪ್ರಕ್ರಿಯೆ, ವಿದ್ಯಾರ್ಥಿವೇತನ (Scholarship), ಕೋರ್ಸ್ ಆಯ್ಕೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಅಗತ್ಯ ಮಾಹಿತಿ ಒಂದೇ ಸ್ಥಳದಲ್ಲಿ ದೊರೆಯಲಿದೆ.
ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆ
ಮೇಳಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ಲಕ್ಕಿ ಡ್ರಾ ವ್ಯವಸ್ಥೆ ಮಾಡಲಾಗಿದೆ. ಅದೃಷ್ಟಶಾಲಿಗಳಿಗೆ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.

ನಿಮ್ಮ ಭವಿಷ್ಯದತ್ತ ಒಂದು ಹೆಜ್ಜೆ
ಉತ್ತಮ ಶಿಕ್ಷಣ ಮತ್ತು ಉತ್ತಮ ಉದ್ಯೋಗದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ‘ಪಬ್ಲಿಕ್ ಟಿವಿ ವಿದ್ಯಾಮಂದಿರ’ ಒಂದು ಅತ್ಯುತ್ತಮ ವೇದಿಕೆಯಾಗಿದೆ. ನಿಮ್ಮ ಭವಿಷ್ಯ ರೂಪಿಸುವ ಈ ಅಪರೂಪದ ಅವಕಾಶವನ್ನ ತಪ್ಪಿಸಿಕೊಳ್ಳದೆ, ಕುಟುಂಬ ಸಮೇತರಾಗಿ ಭಾಗವಹಿಸಿ.
ಶೈಕ್ಷಣಿಕ ನೆರವು: ಸ್ಪಾಟ್ ಅಡ್ಮಿಷನ್, ಆಕರ್ಷಕ ಸ್ಕಾಲರ್‌ಶಿಪ್‌ಗಳು ಹಾಗೂ ಉಚಿತ ಬಹುಮಾನಗಳು ಲಭ್ಯವಿರಲಿವೆ.
ವೃತ್ತಿಪರ ಮಾರ್ಗದರ್ಶನ: ವಿದೇಶಿ ಉದ್ಯೋಗಾವಕಾಶ, ಸ್ಟಾರ್ಟ್‌ಅಪ್‌ಗಳಿಗೆ ಸೂಕ್ತ ಕೋರ್ಸ್‌ಗಳು ಹಾಗೂ ‘ಸ್ಟೂಡೆಂಟ್ ಫಾರಿನ್ ಎಕ್ಸ್‌ಚೇಂಜ್ ಪ್ರೋಗ್ರಾಂ’ ಕುರಿತು ವಿಷಯ ತಜ್ಞರಿಂದ ಸಂಪೂರ್ಣ ಮಾಹಿತಿ ಸಿಗಲಿದೆ.

ದಿನಾಂಕ: ಆಗಸ್ಟ್ 8 ಮತ್ತು 9
ಸ್ಥಳ: ಗಾಯತ್ರಿ ವಿಹಾರ್, ಅರಮನೆ ಮೈದಾನ, ಗೇಟ್ ಸಂಖ್ಯೆ-4, ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ
ಪ್ರವೇಶ: ಸಂಪೂರ್ಣ ಉಚಿತ
ಹೆಚ್ಚಿನ ವಿವರಗಳು ಹಾಗೂ ಮಾಹಿತಿಗಾಗಿ 99000 60815 ಅಥವಾ 99000 60891 ಈ ನಂಬರ್‌ಗೆ ಸಂಪರ್ಕಿಸಬಹುದು.
ಪ್ಲಾಟಿನಂ ಪ್ರಾಯೋಜಕರು
ರಾಮಯ್ಯ ಯೂನಿವರ್ಸಿಟಿ, ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ, ಪ್ರೆಸಿಡೆನ್ಸಿ ಯೂನಿವರ್ಸಿಟಿ, ಕೇಂಬ್ರಿಡ್ಜ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ
ಗೋಲ್ಡ್ ಪ್ರಾಯೋಜಕರು
ಇಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ , ಸಿಎಂಆರ್ ಯೂನಿವರ್ಸಿಟಿ, ಬಿಜೆಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಚಾಣಕ್ಯ ಯೂನಿವರ್ಸಿಟಿ, ಪಾರುಲ್ ಯೂನಿವರ್ಸಿಟಿ

ಸಿಲ್ವರ್ ಪ್ರಾಯೋಜಕರು
ಎಎಂಸಿ ಇನ್‌ಸ್ಟಿಟ್ಯೂಷನ್ಸ್, ಇಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ಸಿಟಿ ಇನ್‌ಸ್ಟಿಟ್ಯೂಷನ್ಸ್, ಪಿಇಎಸ್ ಯೂನಿವರ್ಸಿಟಿ, ಅಮಿಟಿ ಯೂನಿವರ್ಸಿಟಿ, ಎಐಎಂಎಸ್ ಇನ್‌ಸ್ಟಿಟೂಷನ್ಸ್, ದಿ ಆಕ್ಸ್‌ಫರ್ಡ್ ಇನ್‌ಸ್ಟಿಟೂಷನ್ಸ್, ಡಾನ್ ಬಾಸ್ಕೋ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್, ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಆಚಾರ್ಯ ಬೆಂಗಳೂರು ಬಿ-ಸ್ಕೂಲ್, ಡಾ. ಎಸಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಸಿಇಎ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್
ಸ್ಪೆಷಲ್ ಪೆವಿಲಿಯನ್
ರಾಮಯ್ಯ ಇನ್‌ಸ್ಟಿಟೂಟ್ ಆಫ್ ಮ್ಯಾನೆಜ್ಮೆಂಟ್
ಗಿಫ್ಟ್ ಸ್ಪಾನರ್ಸ್
ಸಪ್ತಗಿರಿ ಎನ್‌ಪಿಎಸ್ ಯೂನಿವರ್ಸಿಟಿ
ಕ್ರಿಯೆಟಿವ್ ಸ್ಟಾಲ್
ಆರ್‌ಆರ್ ಇನ್‌ಸ್ಟಿಟೂಷನ್ಸ್
ಬೆವರೆಜ್ ಪಾರ್ಟ್‌ನರ್
ಬಾಯರ್ಸ್ ಕಾಫೀ

