ವಾಷಿಂಗ್ಟನ್: ಇರಾನ್ ಜನರು ಅಲಿ ಖಮೇನಿಯನ್ನು (Ali Khamenei) ದ್ವೇಷಿಸುತ್ತಿದ್ದರು. ಅಂತ್ಯಕ್ರಿಯೆಯಲ್ಲಿ ಅಳುತ್ತಿರುವುದೆಲ್ಲ ಮೊಸಳೆ ಕಣ್ಣೀರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆ ನೀಡಿದ್ದಾರೆ.
ಅಲಿ ಖಮೇನಿ ಅಂತ್ಯಕ್ರಿಯೆ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರಾನಿಯನ್ನರು ಸೇರಿದ್ದಾರೆ. ದೇಶದ ಸರ್ವೋಚ್ಚ ನಾಯಕನ ಸಾವಿಗೆ ಇರಾನ್ ಸ್ಪೀಕರ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಇರಾನಿಯನ್ನರು ಅಳುತ್ತಿರುವುದನ್ನು ನೋಡಿ ಟ್ರಂಪ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ಖಮೇನಿಯ 14 ತಿಂಗಳ ಮೊಮ್ಮಗಳೂ ಬಲಿ – ತಾತನ ಜೊತೆ ಮಗುವಿನ ಪುಟ್ಟ ಶವಪೆಟ್ಟಿಗೆ ರಿವೀಲ್
ಒಂದೇ ಹೊಡೆತದಿಂದ ಇರಾನ್‌ನ ಉಳಿದಿರುವ ನಾಯಕರನ್ನು ಹೊಡೆದು ಹಾಕಬಹುದು. ಆದರೆ, ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ, ಆಗ ನಮಗೆ ಮಾತುಕತೆ ನಡೆಸಲು ಯಾರೂ ಇರುವುದಿಲ್ಲ. ಅವರು ಒಪ್ಪಂದ ಮಾಡಿಕೊಳ್ಳಲು ಬೇಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.
ಖಮೇನಿಯವರ ಅಂತ್ಯಕ್ರಿಯೆಯ ಕಾರ್ಯಕ್ರಮಗಳು ಮುಗಿಯುವವರೆಗೆ ಮಾತುಕತೆಗಳಿಂದ ಒಂದು ವಾರ ವಿರಾಮ ತೆಗೆದುಕೊಳ್ಳಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ. ಈ ಮಧ್ಯೆ, ಯಾವುದೇ ಕಡೆಯವರು ಇನ್ನೊಬ್ಬರ ಮೇಲೆ ದಾಳಿ ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಅನ್ನು 36 ವರ್ಷಗಳ ಕಾಲ ಆಳಿದ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗೆ ಫೆ.28 ರಂದು ಬಲಿಯಾದರು. ಇಸ್ಲಾಮಿಕ್ ನ್ಯಾಯಶಾಸ್ತ್ರವು ಸಾಮಾನ್ಯವಾಗಿ ಸತ್ತ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ, ಆದರ್ಶಪ್ರಾಯವಾಗಿ 24 ಗಂಟೆಗಳ ಒಳಗೆ ಸಮಾಧಿ ಮಾಡಬೇಕೆಂದು ತಿಳಿಸುತ್ತದೆ. ಆದರೆ ಯುದ್ಧದ ಸ್ಥಿತಿಯಿಂದಾಗಿ ಖಮೇನಿ ಅಂತ್ಯಕ್ರಿಯೆಯನ್ನು ತಿಂಗಳುಗಳ ಬಳಿಕ ತಡವಾಗಿ ನಡೆಸಲಾಗುತ್ತಿದೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೆ ಮಗ ಮೊಜ್ತಬಾ ಹೋಗಲ್ಲ – ಭಾರತದಿಂದ ಭಾಗವಹಿಸೋದ್ಯಾರು?
