ನ್ಯೂಯಾರ್ಕ್: ಘರ್ಷಣೆಗಳಿಂದ ಕೂಡಿದ್ದ ಪಂದ್ಯದಲ್ಲಿ ಪರಾಗ್ವೆ (Paraguay) ವಿರುದ್ಧ 1-0 ಅಂತರದಿಂದ ಗೆದ್ದು ಫ್ರಾನ್ಸ್ (France) ತಂಡ 2026ರ ಫಿಫಾ ವಿಶ್ವಕಪ್ (FIFA World Cup 2026) ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಫಿಲಡೆಲ್ಫಿಯಾದಲ್ಲಿ ನಡೆದ 2026 ರ ಫಿಫಾ ವಿಶ್ವಕಪ್ ರೌಂಡ್ ಆಫ್ 16 ಪಂದ್ಯದಲ್ಲಿ, ಪೆನಾಲ್ಟಿ ಸ್ಪಾಟ್‌ನಿಂದ ಕೈಲಿಯನ್ ಎಂಬಾಪೆ (Kylian Mbappe) ಗೆಲುವಿನ ಗೋಲು ಗಳಿಸಿದರು. ಫ್ರಾನ್ಸ್‌ನ ವಿಂಗರ್ ಡಿಸೈರ್ ಡೌ ನಿರ್ಣಾಯಕ ಪೆನಾಲ್ಟಿಯನ್ನು ಗೆದ್ದರು. ಇದನ್ನು VAR ಹಸ್ತಕ್ಷೇಪದ ನಂತರವೇ ನೀಡಲಾಯಿತು. ಇದನ್ನೂ ಓದಿ: ವಿಶ್ವಕಪ್ ಬಳಿಕ ನಿವೃತ್ತಿ – ಸಹೋದರಿಯ ಹೇಳಿಕೆ ಅಲ್ಲಗಳೆದ ರೊನಾಲ್ಡೋ
ಎಂಬಾಪೆ ಆರಂಭದಲ್ಲಿ ಒಂದು ಸುವರ್ಣ ಅವಕಾಶವನ್ನು ಕಳೆದುಕೊಂಡರು. ಪರಾಗ್ವೆಯ ಆಟಗಾರರೊಂದಿಗೆ ಒಂದೆರಡು ಘರ್ಷಣೆ ಮಾಡಿಕೊಂಡರು. ಮೊದಲಾರ್ಧದಲ್ಲಿ ದೃಢನಿಶ್ಚಯದ ಪರಾಗ್ವೆ ತಂಡವನ್ನು ಮಣಿಸಲು ಫ್ರಾನ್ಸ್ ಹೆಣಗಾಡಿತು. ಬಳಿಕ ಕೈಲಿಯನ್ ಎಂಬಾಪೆ ಪೆನಾಲ್ಟಿ ಸ್ಪಾಟ್‌ನಿಂದ ತಮ್ಮ ಗೋಲು ಗಳಿಸಿದರು.
2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮೊರಾಕ್ಕೊ ತಂಡವನ್ನು ಫ್ರಾನ್ಸ್ ಎದುರಿಸಿತ್ತು. ಅದಾದ ಬಳಿಕ ಈಗ ಜು. 10 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕ್ಕೊ ತಂಡವನ್ನು ಫ್ರಾನ್ಸ್ ಎದುರಿಸಲಿದೆ. ಇದನ್ನೂ ಓದಿ: ಗೆಲುವಿನ ಓಟ ಮುಂದುವರಿಸಿದ ಅರ್ಜೆಂಟೀನಾ – ಫಿಫಾ ವಿಶ್ವಕಪ್ 16ರ ಸುತ್ತಿಗೆ ಮೆಸ್ಸಿ ಪಡೆ ಲಗ್ಗೆ
