ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ (Traffic Rules Violation) ಮಾಡಿದ ವಾಹನ ಸವಾರರಿಗೆ 50% ರಿಯಾಯಿತಿ (Discount) ದರದಲ್ಲಿ ದಂಡ ಕಟ್ಟಲು ಇಲಾಖೆ ಅವಕಾಶ ನೀಡಿದೆ. 2026ರ ಜೂನ್ 21ರಿಂದ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶ ನೀಡಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜೂನ್ 21ರಿಂದ ಜುಲೈ 4ರವರೆಗೆ 6,06,032 ಪ್ರಕರಣಗಳು ಇತ್ಯರ್ಥವಾಗಿದೆ. ಈ ಮೂಲಕ ಎಲ್ಲಾ ವಿಧಾನಗಳಿಂದ ಬರೋಬ್ಬರಿ 18,15,42,200 ರೂ. ಹಣ ಸಂಗ್ರಹವಾಗಿದೆ. ಜುಲೈ 10ರವರೆಗೂ 50%ರಷ್ಟು ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕೆಆರ್ ಸರ್ಕಲ್‌ನಲ್ಲಿ ಬಿಎಂಟಿಸಿ ಬಸ್ ಅಪಘಾತ ಪ್ರಕರಣ – ಚಾಲಕನ ವಿರುದ್ಧ FIR ದಾಖಲು
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಿ ದಂಡ ಪಾವತಿಗೆ ಸಹಕಾರಿಯಾಗಲು ಜಂಕ್ಷನ್‌ಗಳಲ್ಲಿ ಪಿಎಸ್‌ಐ ಒಳಗೊಂಡಂತೆ ಸಿಬ್ಬಂದಿ ನಿಯೋಜಿಸಲಾಗಿದೆ. ಈ ನಡುವೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡದಂತೆ ಅರಿವು ಮೂಡಿಸುವುದರ ಜೊತೆಗೆ ದಂಡ ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಭಾರತದ ದೇವಾಲಯಗಳನ್ನು ನಿರ್ವಹಿಸೋದ್ಯಾರು? – ರಾಜ್ಯಗಳ ಪಾತ್ರ ಏನು?
